
ಬೆಳಗಾವಿ:
ಕುಂದಾನಗರಿಯಲ್ಲಿ ಜಾರಕಿಹೊಳಿ ವರ್ಸಸ್ ಕತ್ತಿ ಫೈಟು ಜೋರಾಗಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಮಾಜಿ ಸಂಸದ ರಮೇಶ್ ಕತ್ತಿ ಈಗ ಹೊಸ ದಾಳ ಉರುಳಿಸೋಕೆ ಸಿದ್ದವಾಗಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಇಂದು ಅವರು ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಯಾರು ಯಾರಿಗೆ ಯಾವಾಗ ಮಿತ್ರರಾಗುತ್ತಾತೆ ಯಾರು ಯಾವಾಗ ಶತ್ರುವಾಗ್ತಾರೆ ಎಂದು ತಿಳಿಯೋದೆ ಇಲ್ಲ. ಮೊನ್ನೆಯಷ್ಟೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಎಬಿ ಪಾಟೀಲ್ ಹಾಗೂ ರಮೇಶ್ ಕತ್ತಿಯವರ ಬಳಿ ಹೋಗಿ ಅವರ ಸಹಕಾರ ಕೋರಿದ್ದರು. ಅದಾದ ಎರಡೇ ದಿನಗಳ ಅಂತರದಲ್ಲಿ ಅದೇ ನಿರ್ದೇಶಕರು ಹೋಗಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಬಾಲಚಂದ್ರ ಜಾರಕಿಜೊಳಿಜ ಸಹಕಾರ ಕೋರಿದ್ದರು. ಇನ್ನು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೂ ಸಹ ಸತೀಶ ಜಾರಕಿಹೊಳಿ ಭೇಟಿ ನೀಡಿ ಸಭೆ ಮಾಡಿದ್ದರು. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಚುನಾವಣೆ ಮಾಡುತ್ತೆವೆ ಎಂದು ಸ್ವತಹ ಬಾಲಚಂದ್ರ ಜಾರಕಿಹೊಳಿಯವರು ಹೇಳಿಕೆ ನೀಡಿದ್ದರು. ಇಷ್ಟು ದಿನ ಕ್ಷೇತ್ರವ್ಯಾಪ್ತಿಯಲ್ಲಿ ನಡೆಯುತ್ತಿದ್ದ ರಾಜಕೀಯ ಈಗ ಬೇರೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು, ಬೇರೆ ಕ್ಷೇತ್ರವನ್ನು ಕಬ್ಜಾ ಮಾಡಿಕೊಳ್ಳುವ ಮಟ್ಟಿಗೆ ಬಂದು ನಿಂತಿದೆ. ಈ ಮಧ್ಯೆ ಇಷ್ಟು ದಿನ ಸುಮ್ಮನೆ ಇದ್ದ ಮಾಜಿ ಸಂಸದ ರಮೇಶ ಜಾರಕಿಹೊಳಿ ಇಂದು ಸಂಜೆ ಗೋಕಾಕ ಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ.ಗೋಕಾಕ ನಗರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ವಿಚಾರದಲ್ಲಿ ಕತ್ತಿ ಮತ್ತು ಜಾರಕಿಹೊಳಿ ಕುಟುಂಬದ ನಡುವೆ ವೈಮನಸು ಬಂದಿರೋದಕ್ಕೆ ಕನ್ನಡಿ ಏನು ಬೇಕಾಗಿಲ್ಲ ಅದು ಈಗ ಓಪನ್ ಸೀಕ್ರೇಟಾಗಿರುವ ವಿಚಾರ. ಈ ಮಧ್ಯೆ ರಮೇಶ ಗೋಕಾಕ ಭೇಟಿ ಕೇವಲ ದರ್ಶನಕ್ಕೋ ಅಥವಾ ಸಂದೇಶ ರವಾಣಿಸಲೋ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.









