ಕ್ರೈಂಜಿಲ್ಲೆಬೆಳಗಾವಿಬೆಳಗಾವಿ ನಗರ

30 ಬ್ಯೂಟಿ ಪಾರ್ಲರ್ಗಳ ಮೇಲೆ ಆರೋಗ್ಯ ಇಲಾಖೆ ದಾಳಿ!ಯಾಕೆ ಗೊತ್ತಾ?

ಬೆಳಗಾವಿ:

ಬೆಳಗಾವಿಯಲ್ಲಿ ಆರೋಗ್ಯ ‌ಇಲಾಖೆ ಅಧಿಕಾರಿಗಳು ಬ್ಯೂಟಿ ಪಾರ್ಲರ್ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಚರ್ಮ ರೋಗ ಚಿಕಿತ್ಸೆ ನೀಡುತ್ತಿದ್ದ 30 ಕ್ಕೂ ಹೆಚ್ಚು ಪಾರ್ಲರ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 10 ಬ್ಯೂಟಿ ಪಾರ್ಲರ್ ಗಳನ್ನು ಸೀಜ್ ಮಾಡಿ 20 ಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳಿಗೆ ನೋಟಿಸ್ ನೀಡಿದ್ದಾರೆ. ಪಾರ್ಲರ್ಗಳಲ್ಲಿ ಹೇರ್ ಪ್ಲಾಂಟೇಷನ್,ಚರ್ಮರೋಗಕ್ಕೆ ಚಿಕಿತ್ಸೆ ನೀಡುತ್ತಿದ್ದ ಆರೋಪ‌ ಕೇಳಿ ಬಂದ ಹಿನ್ನೆಲಯಲ್ಲಿ ಈ ದಾಳಿ ನಡೆದಿದೆ. ಮುಖದ ಕಾಂತಿಯನ್ನು ಹೆಚ್ಚಿಸುವುದಾಗಿ ಹೇಳಿ ಮುಗ್ಧ ಜನರಿಗೆ ಕೆಮಿಕಲ್‌ ಸಿರೈಡ್ ಬಳಕೆ ಮಾಡಲು ಹೇಳುತ್ತಿದ್ದ ಎನ್ನಲಾಗಿದೆ. ಜನರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿದ್ದವರಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದು ಸಾರ್ವಜನಕರಿಂದಲೂ ಸಹ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

TV24 News Desk
the authorTV24 News Desk

Leave a Reply