ಬೆಳಗಾವಿ:
ನೀರಲ್ಲಿ ತೋಯ್ದ ಬಟ್ಟೆಗಳನ್ನ ಒಣ ಹಾಕೋದು ಕಾಮನ್ ಆದರೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಸುಕ್ಷೇತ್ರ ಯಲ್ಲಮ್ಮನ ಸನ್ನಿಧಾನದಲ್ಲಿ ನೋಟುಗಳನ್ನು ಒಣ ಹಾಕಲಾಗುತ್ತಿದೆ.ಮೊನ್ನೆಯಷ್ಟೆ ಸುರಿದ ಭಾರಿ ಮಳೆಗೆ ಸವದತ್ತಿ ಯಲ್ಲಮ್ಮನ ಕ್ಷೇತ್ರ ಸಂಪೂರ್ಣ ಜಲಾವೃತವಾಗಿತ್ತು. ಆ ವೇಳಿ ನೀರಿನಲ್ಲಿ ಯಲ್ಲಮ್ಮನ ಸನ್ನಿಧಿಯಲ್ಲಿದ್ದ ಹುಂಡಿಯೂ ಸಹ ಮುಳುಗಡೆಯಾಗಿತ್ತು.ಸುಮಾರು ಮೂರು ಅಡಿ ನೀರಲ್ಲಿ ಹುಂಡಿ ಮುಳುಗಡೆಯಾಗಿತ್ತು. ಹೀಗಾಗಿ ನಿನ್ನೆ ನೀರು ಕಡಿಮೆಯಾದ ಬಳಿಕ ದೇವಸ್ಥಾನದ ಸಿಬ್ಬಂಧಿ ಹುಂಡಿಯನ್ನು ತೆಗೆದು ಹುಂಡಿಯಲ್ಲಿದ್ದ ನೋಟುಗಳನ್ನು ಬಿಸಿಲಿಗೆ ಒಣ ಹಾಕಿದ್ದಾರೆ. ದೇವಸ್ಥಾನದ ಆವರಣದಲ್ಲಿ ಎಲ್ಲಿ ನೋಡಿದರೂ ಅಲ್ಲಿ ನೋಟುಗಳನ್ನ ಸಧ್ಯ ಸಿಬ್ಬಂಧಿಗಳು ಒಣಗಿಸೋ ಕೆಲಸದಲ್ಲಿ ತೊಡಗಿದ್ದಾರೆ. ಕಾಣಿಕೆಯಲ್ಲಿದ್ದ ನೋಟುಗಳೆಲ್ಲ ಕುಂಕುಮ ಹಾಗೂ ಭಂಡಾರಮಯವಾಗಿವೆ.ಮತ್ತೊಂದೆಡೆ ನಿಂತ ನೀರನ್ನು ಹೊರ ಹಾಕಿ ದೇವಸ್ಥಾನವನ್ನು ಸ್ವಚ್ಛ ಮಾಡುವ ಕೆಲಸದಲ್ಲೂ ಸಹ ಸಿಬ್ಬಂಧಿ ತೊಡಗಿದ್ದಾರೆ. ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ನೋಡಿಕೊಳ್ತಿದೆ.













