
ಬೆಳಗಾವಿ:
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಹೀನ ಕೃತ್ಯವೊಂದು ನಡೆದಿದೆ. ಜಮೀನು ವಿವಾದ ಹಾಗೂ ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನನ್ನು ಗಿಡಕ್ಕೆ ಕಟ್ಟಿ ಥಳಿಸಲಾಗಿದೆ.
ವಿಠ್ಠಲ್ ಲಕ್ಷ್ಮಣ ನಾಯ್ಕರ್(39) ಎಂಬ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಈ ಸಂಬಂಧ ರಾಮದುರ್ಗ ಕಟಕೋಳ ಠಾಣೆಯಲ್ಲಿ ಒಟ್ಟು ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಗಾಯಾಳು ವಿಠ್ಠಲ್ ದೂರಿನನ್ವಯ ಈರಣ್ಣ ಪರಕನಟ್ಟಿ,ಬಸನಗೌಡ ಪಾಟೀಲ್,ಪ್ರದೀಪ್ ಪಕ್ಕಾನಟ್ಟಿ,ಮಹಾಂತೇಶ ಪಕ್ಕಾನಟ್ಟಿ,ಸಚಿನ್ ಪಕ್ಕಾನಟ್ಟಿ,ನಿಂಗರಾಜ್ ಪಕ್ಕಾನಟ್ಟಿ,ಸಂಗಪ್ಪ ಪಕ್ಕಾನಟ್ಟಿ ವಿರುದ್ಧ ದೂರು ದಾಖಲಾಗಿದೆ.
ಸಧ್ಯ ಯುವಕ ವಿಠ್ಠಲ್ ನನ್ನು ಗಿಡಕ್ಕೆ ಕಟ್ಟಿಹಾಕಿ ಹಲ್ಲೆ ಮಾಡುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.








