ಜಿಲ್ಲೆಬೆಳಗಾವಿ

ಜಗಳಾ ಮಾಡಬ್ಯಾಡ್ರಿ ಅಂದಿದ್ದಕ್ ಪೊಲೀಸ್ ಮ್ಯಾಲ ಕೈ ಮಾಡಿದ್ದ ಹುಡುಗೋರ್ ಮಾವಗೋಳ ವಶಕ್ಕ!!

ಬೆಳಗಾವಿ:

ಬೆಳಗಾವಿಯ ಡಿಸಿ ಕಚೇರಿಯ ಎದುರೇ ಪೊಲೀಸ್ ಪೇದೆಯ ಮೇಲೆ ಯುವಕರು ಹಲ್ಲೆ ಮಾಡಿದ ಘಟನೆ ನಡೆದಿದೆ. ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಯುವಕರು ಹೊಡೆದಾಡುತ್ತಿದ್ದರು ಎನ್ನಲಾಗಿದೆ. ಸ್ಥಳದಲ್ಲಿಯೇ ಇದ್ದ ಪೊಲೀಸ್ ಪೇದೆ ಜಗಳವಾಡಬೇಡಿ ಎಂದು ಜಗಳ ಬಿಡಿಸಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಯುವಕರು ಪೇದೆಯ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಪೇದೆಯನ್ನು ಮಾರ್ಕೇಟ್ ಪೊಲೀಸ್ ಠಾಣೆಯ ಪೇದೆ ಮಲ್ಲಿಕಾರ್ಜುನ್ ಗುಂಜಿಕರ್ ಎಂದು ಗುರುತಿಸಲಾಗಿದೆ. ಜಗಳವಾಡುತ್ತಿದ್ದ ಯುವಕರು ಯಾಕಾಗಿ ಜಗಳವಾಡ್ತಿದ್ದರು ಅವರು ಎಲ್ಲಿಯವರು ಎಂದು ಇನ್ನು ಗೊತ್ತಾಗಿಲ್ಲ. ಆದರೆ ನಡು ರಸ್ತೆಯಲ್ಲಿಯೇ ಜಗಳ ಮಾಡುತ್ತಿದ್ದ ಯುವಕರನ್ನು ತಡೆಯಲು ಹೋದ ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದ್ದು ಈಗ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಯುವಕರು ಪೊಲೀಸ್ ಪೇದೆಯ ಮೇಲೆ ಹಲ್ಲೆ ‌ಮಾಡುತ್ತಿದ್ದಂತೆ ಎರಡು ಗುಂಪುಗಳ ಯುವಕರನ್ನು ಸ್ಥಳದಲ್ಲಿದ್ದ ಬೇರೆ ಪೊಲೀಸರು ನಡು ರಸ್ತೆಯಲ್ಲಿಯೇ ಕಪಾಳಮೋಕ್ಷ ಮಾಡಿ ಕರೆದೊಯ್ದಿದ್ದಾರೆ.

TV24 News Desk
the authorTV24 News Desk

Leave a Reply