ಬೆಳಗಾವಿಬೆಳಗಾವಿ ನಗರ

ವಿಷ ಜಂತು ಕಚ್ಚಿ ಗಂಡನ ಸಾವು ಮಡದಿ ಸ್ಥಿತಿ ಚಿಂತಾಜನಕ 

ಬೆಳಗಾವಿ: ಅನ್ನಪೂರ್ಣೇಶ್ವರಿ ನಗರದ ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್​ವೊಂದನ್ನು ಮಾಡಿಕೊಂಡು ಅಲ್ಲಿಯೇ ವಾಚ್​ಮನ್​ ಆಗಿ ಕೆಲಸ ಮಾಡುತ್ತಿದ್ದ ವಿಷ ಜಂತು ಕಚ್ಚಿ ಗಂಡನ ಸಾವು ಮಡದಿ ಸ್ಥಿತಿ ಚಿಂತಾಜನಕವಾಗಿದೆ.
ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಸಿದ್ದಪ್ಪ ಚಿವಟಗುಂಡಿ ಈತ ತಾಯಿ, ಪತ್ನಿ, ಮೂವರು ಮಕ್ಕಳ ಜೊತೆ ಕೆಲಸ ಅರಿಸಿ ಬೆಳಗಾವಿ ನಗರಕ್ಕೆ ಬಂದು ನೆಲೆಸಿದ್ದ.
ಎಂದಿನಂತೆ ಕೆಲಸ ಮುಗಿಸಿ ರಾತ್ರಿ ವೇಳೆ ತಾಯಿ, ಪತ್ನಿ, ಮೂವರು ಮಕ್ಕಳ ಜೊತೆ ಊಟ ಮಾಡಿ ಶೆಡ್​ನಲ್ಲಿ ಪ್ರತ್ಯೇಕವಾಗಿ ಪತ್ನಿ ಜೊತೆ ಮಲಗಿದ್ದಾನೆ. ಈ ವೇಳೆ ಏನೋ ಹುಳ ಕಚ್ಚಿದ ಹಾಗೆ ಅನುಭವ ಆಗಿದೆ. ಇದನ್ನ ತಾಯಿ ತಿಪ್ಪವ್ವ ಬಳಿ ಹೇಳಿ ಮಲಗಲು ಹೋಗಿದ್ದಾನೆ. ಕೆಲ ಸಮಯದ ಬಳಿಕ ಮಗ ಒದ್ದಾಡೋದನ್ನು ಕಂಡು ತಾಯಿ ತಿಪ್ಪವ್ವ ಮನೆಯಿಂದ ಹೊರಬಂದು ಮತ್ತೋರ್ವ ವಾಚ್​ಮನ್​ಗೆ ವಿಷಯ ಮುಟ್ಟಿಸಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಬಳಿಕ ಸ್ಥಳೀಯರು ಸೇರಿ ಅಂಬುಲೆನ್ಸ್ ಗೆ ಕರೆ ಮಾಡಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಇಬ್ಬರನ್ನೂ ರವಾನಿಸಿದ್ದಾರೆ. ಬಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಿದ್ದಪ್ಪ ಚಿವಟಗುಂಡಿ ಸಾವನ್ನಪ್ಪಿದ್ದಾನೆ.  ಪತ್ನಿ ನಾಗವ್ವ ಚಿವಟಗುಂಡಿ ಸ್ಥಿತಿ ಚಿಂತಾಜನಕವಾಗಿದ್ದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಸಿದ್ದಪ್ಪ ಚಿವಟಗುಂಡಿ ಸಹೋದರ, ಅತ್ತಿಗೆ ಸಂಬಂಧಿಕರು  ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸಿದ್ದಪ್ಪ ಮರಣೋತ್ತರ ಪರೀಕ್ಷೆ ಬಳಿಕ ಹುಟ್ಟೂರು ಸಾಣಿಕೊಪ್ಪಕ್ಕೆ ಮೃತದೇಹ ತಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
 
ತೀವ್ರ ಅಸ್ವಸ್ಥಗೊಂಡಿರುವ ನಾಗವ್ವ ಚಿವಟಗುಂಡಿಗೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಎಂಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಈ ದಂಪತಿಗೆ ರಾತ್ರಿ ವೇಳೆ ಹಾವು ಕಚ್ಚಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಅಸ್ವಸ್ಥ ನಾಗವ್ವ ಚಿವಟಗುಂಡಿ ಮೈ ಮೇಲೆ ಯಾವುದೇ ರೀತಿಯ ಹಾವು ಕಚ್ಚಿದ ಗುರುತು ಇಲ್ಲ ಎಂದು ವೈದ್ಯರ ತಪಾಸಣೆ ವೇಳೆ ತಿಳಿದು ಬಂದಿದೆ.
 
ಆದರೆ ಯಾವುದೋ ವಿಷಜಂತು ಕಚ್ಚಿದ ರೀತಿಯ ಲಕ್ಷಣಗಳಿದ್ದು ನಾಗವ್ವಗೆ ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ವೆಂಟಿಲೇಟರ್​ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡಿರುವ ನಾಗವ್ವ ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಓರ್ವ ಗಂಡು ಮಗು ಇದ್ದು ಅವರ ವಿದ್ಯಾಭ್ಯಾಸ, ಜೀವನೋಪಾಯಕ್ಕೆ ಸರ್ಕಾರ ಸೂಕ್ತ ನೆರವು ನೀಡಿ ಸಹಾಯಕ್ಕೆ ಬರಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!