ಬೆಳಗಾವಿ:
ಸಾಮಾನ್ಯವಾಗಿ ಅಂಗಡಿಗಳಿಗೆ, ಮಳಿಗೆಗಳಿಗೆ ಕನ್ನ ಹಾಕುವ ಖದೀಮರು ಬಂಗಾರ,ಬೆಳ್ಳಿ, ದೊಡ್ಡ ಮೊತ್ತದ ಹಣವನ್ನು ಕದ್ದು ಹೋಗ್ತಾರೆ. ಆದರೆ ಇಲ್ಲೊಂದು ಕಡೆ ಪಾನ್ ಶಾಪ್ ಅಂಗಡಿಗೆ ಕನ್ನ ಹಾಕಿದ ಖದೀಮರು ಅಂಗಡಿಯಲ್ಲಿದ್ದ ಬೀಡಿ ಸಿಗರೇಟ್ ಹಾಗೂ ಗುಟ್ಕಾ ಸೇರಿದಂತೆ ಚಿಲ್ಲರೆ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮದ ಪಾನ್ ಶಾಪ್ ಒಂದರಲ್ಲೊ ಘಟನೆ ನಡೆದಿದ್ದು ಬನ್ನೂರು ಗ್ರಾಮದ ನಿವಾಸಿ ಪ್ರಕಾಶ್ ಕುಂದ್ರಾಳ ಎಂಬುವವರಿಗೆ ಸೇರಿದ ಪಾನ್ ಶಾಪ್ ಗೆ ಇಬ್ಬರು ಖದೀಮರು ನುಗ್ಗಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಪಾನ್ ಶಾಪ್ ಬಾಗಿಲು ಮುರಿದು ಒಳಗ ನುಗ್ಗಿದ ಓರ್ವ ಖದೀಮ ಒಳ ಬಂದು ಅಂಗಡಿಯಲ್ಲಿದ್ದ ಬೀಡಿ ಸಿಗರೇಟ್ ಕದ್ದರೆ ಮತ್ತೋರ್ವ ಖದೀಮ ಹೊರನಿಂತು ಯಾರಾದರೂ ಬರ್ತಾರಾ ಎಂದು ಕಾವಲು ಕಾದಿದ್ದಾನೆ. ಅಂಗಡಿಯ ತಟ್ಟೆಯೊಂದರಲ್ಲಿಟ್ಟಿದ್ದ ಬೀಡಿ,ಸಿಗರೇಟ್,ಹಾಗೂ ಚಿಲ್ಲರೆ ಹಣವನ್ನು ಕದ್ದು ಕಳ್ಳರು ಪರಾರಿಯಾಗಿದ್ದು, ಕಳ್ಳರ ಸಂಪೂರ್ಣ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















