ಜಿಲ್ಲೆಬೆಳಗಾವಿಬೆಳಗಾವಿ ನಗರ

ವ್ಯವಸ್ಥೆಯ ಜನ್ಮ ಜಾಲಾಡಿದ ಲೋಕಾ ನ್ಯಾಯಮೂರ್ತಿ ಬಿ ಎಸ್ ಪಾಟೀಲ್

ಬೆಳಗಾವಿ:

ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೂರು ದಿನಗಳಿಂದ ಜಿಲ್ಲೆಯಲ್ಲಿ ಪರಿಶೀಲನೆ ಮಾಡಿದ್ದೇವೆ ಎಂದು ಮಾತು ಪ್ರಾಎಂಭಿಸಿದ ಅವರು ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳು ಔಷದ ಉಗ್ರಾಣ ಕೇಂದ್ರಗಳು, ಹಾಗೂ ಸಬ್ ರೆಜಿಸ್ಟಾರ್ ಕಚೇರಿಗಳು,ಆಸ್ಪತ್ರೆಗಳನ್ನು  ಅಧಿಕಾರಿಗಳು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸದ್ದಲ್ಲದೆ ಇಡೀ ವ್ಯವಸ್ಥೆಯ ಜನ್ಮ  ಜಾಲಾಡಿದರು.ಎಲ್ಲೆಲ್ಲಿ ದೂರು ಬಂದಿವೆಯೋ ನಾವು  ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ಮಾಡುತ್ತೆವೆ. ನಾವು ಬರೋ ಮಾಹಿತಿ ಹಿನ್ನೆಲೆಯಲ್ಲಿ ಕೆಲವರು ಎಚ್ಚರ ವಹಿಸಿದ್ರು,ಜನ ಯಾಕೆ ಮತ್ತೆ ಕಚೇರಿ ಬರ್ತಾರೆ ಎನ್ನುವುದು ಗೊತ್ತಾಗಿದೆ ಆಸ್ಪತ್ರೆ, ಪಾಲಿಕೆ, ನಗರಸಭೆ, ತಹಶಿಲ್ದಾರ, ಎಡಿಎಲ್ಆರ್ ಆಫೀಸ್,
ಅಬಕಾರಿ, ಸ್ಮಾರ್ಟ್ ಸಿಟಿ ಕಚೇರಿಗೆ ಭೇಟಿ ಕೊಟ್ಟಿದ್ದೇವೆ. ಗೋಕಾಕ್ ನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದೆ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಅಕ್ರಮ ನಡೆದಿದೆ.
ನಕಲಿ ದಾಖಲೆ ಸೃಷ್ಟಿ ಮಾಡಿ ಆಸ್ತಿ ವರ್ಗಾವಣೆ ಆಗಿದೆ. ಇಂತಹ ಮೂರು ಪ್ರಕರಣಗಳು ಬದಲಾಗಿದೆ
ಇದು ಕಾನೂನು ಪ್ರಕಾರ ದರೋಡೆ ಮಾಡೋದು ಇದು ಪೂರ್ವ ಸಿದ್ದತೆಯಿಂದಲೇ ನಡೆಯುತ್ತಿದೆ.
ಕೃತ್ಯದಲ್ಲಿ ಸಬ್ ರೆಜಿಸ್ಟರ್ ಸಹ ಪಾಲ್ಗೊಂಡಿದ್ದಾರೆ ಈ ಬಗ್ಗೆ ದೂರು ದಾಖಲಿಸಿ ಸೂಕ್ತ ತನಿಖೆ ಮಾಡುತ್ತೇವೆ ಎಂದ ಅವರು
ಬಿಮ್ಸ್ ನ ಹೆರಿಗೆ ವಾರ್ಡ್ ನಲ್ಲಿ ಮಳೆಯಿಂದ ಸೋರುತ್ತಿದೆ.
ಅಲ್ಲಿಯೇ ವಿದ್ಯುತ್ ಸಂಪರ್ಕದ ಪಾಯಿಂಟ್ ಗಳು ಇವೆ.
ಅಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಗೋಕಾಕ್ ಗೋಡೌನ್ ನಿಂದ ಐದು ತಾಲೂಕುಗಳಿಗೆ ಔಷಧಿ ಸರಬರಾಜು ಮಾಡಲಾಗುತ್ತದೆ
ಅಲ್ಲಿನ ಸುಮಾರು 98 ಲಕ್ಷ ರೂಪಾಯಿ ಮೌಲ್ಯದ ಔಷಧಿ ಅವಧಿ ಮೀರಿದೆ,ಔಷಧಿ ಉಪಯೋಗ ಮಾಡಿಲ್ಲ.
ಜನರ ದುಡ್ಡು ಈ ರೀತಿಯಲ್ಲಿ ಪೋಲು ಆಗಲು ಬಿಡಬೇಕಾ ಎಂದು ಅವರು ಪ್ರಶ್ನೆ ಮಾಡಿದರು.
ನಾವು ಈ ನಿಟ್ಟಿನಲ್ಲಿ ಕೇಸ್ ದಾಖಲು ಮಾಡಿದ್ದೇವೆ.
ಖರೀದಿ ಮಾಡೋ ಸಂದರ್ಭದಲ್ಲಿ ಅವಧಿ ಅರ್ಧದಷ್ಟು ಮುಗಿದಿರುತ್ತದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಹೇಳಿದರು.

TV24 News Desk
the authorTV24 News Desk

Leave a Reply