ಕ್ರೈಂಜಿಲ್ಲೆಬೆಳಗಾವಿ

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದವ ಎನ್ ಕೆಲಸ ಮಾಡ್ಕೊಂಡಿದ್ದ ಗೊತ್ತಾ?

ಬೆಳಗಾವಿ:

ಮಸೀದಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಳಗಾವಿಯಲ್ಲಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಸುದ್ಧಿಗೋಷ್ಠಿ ನಡೆಸಿ ಪ್ರಕರಣದ ಕುರಿತು ಮಾಹಿತಿ ನೀಡಿದರು.
ನಿನ್ನೆ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪುನೀತ್ ಕೆರೆಹಳ್ಳಿ ಒಂದು ಪೋಸ್ಟ್ ಮಾಡಿದ್ದರು ಅದರಲ್ಲಿ ಓರ್ವ ವ್ಯಕ್ತಿ ಮಾತಾಡಿದ ಆಡಿಯೋ ಮತ್ತು ವಿಡಿಯೋ ತುಣುಕು ಇತ್ತು.
ಇದರಲ್ಲಿ ಬಾಲಕಿ ಮೇಲೆ ಓರ್ವ ವ್ಯಕ್ತಿ ಮಲಗುವ ರೀತಿಯಲ್ಲಿತ್ತು
ಕೂಡಲೇ ನಮ್ಮ ಸಿಇಎನ್ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು,ವಿಡಿಯೋದಲ್ಲಿನ ವಿಳಾಸ ಆಧರಿಸಿ ನಮ್ಮ ಪೊಲೀಸರು ತನಿಖೆ ಶುರು ಮಾಡಿದ್ದರು. ಕೂಡಲೇ ನಮ್ಮ ಮುರಗೋಡ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು ಈ ಘಟನೆ 2023 ಅಕ್ಟೋಬರ್ 5ರಂದು ಘಟನೆ ಆಗಿತ್ತು ಮಸೀದಿ ಪಕ್ಕದ ಮನೆಯ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಗೊತ್ತಾಗಿತ್ತು ಆರೋಪಿ ಘಟನೆ ನಡೆದ ಹಿಂದಿನ ದಿನ ಬಾಗಲಕೋಟೆಯ ಮಹಾಲಿಂಗಪುರದಿಂದ ಬಂದಿದ್ದ
ಚಿಕ್ಕಮ್ಮನ ಮನೆಗೆ ಬಂದಾಗ ಹೀನಾಯ ಕೃತ್ಯ ಎಸಗಿದ್ದ ಈ ವಿಚಾರ ಗೊತ್ತಾದಾಗ ಅಲ್ಲಿರುವ ಸ್ಥಳೀಯರು ಬಾಲಕಿ ತಂದೆ ಕರೆದು ಮಾತಾಡಿದ್ದರು ಆ ದಿನ ಕೇಸ್ ಕೊಡುವುದು ಬೇಡಾ ಅಂತಾ ತೀರ್ಮಾನಿಸಿ ಬಿಟ್ಟಿದ್ದರು ಇದಾದ ಬಳಿಕ ವಿಡಿಯೋ ವೈರಲ್ ಆಗ್ತಿದ್ದಂತೆ ಬಾಲಕಿ ಪೋಷಕರ ಜೊತೆಗೆ ಮಾತಾಡಲಾಗಿತ್ತು.
ತಂದೆ ತಾಯಿ ದೂರು ನೀಡಲು ಒಪ್ಪದ ಕಾರಣ ಜಿಲ್ಲಾ‌‌ ಮಕ್ಕಳ ರಕ್ಷಣಾ ಘಟಕದಿಂದ ಕೇಸ್ ಪಡೆದಿದ್ದೇವೆ ದೂರಿನನ್ವಯ ನಿನ್ನೆ ರಾತ್ರಿ ಆರೋಪಿ ತುಫೇಲ್ ಅಹ್ಮದ್ ದಾದಾಫೀರ್ ಬಂಧಿಸಿದ್ದೇವೆ ಆರೋಪಿ ಮೌಲ್ವಿ ಅಲ್ಲಾ ಬದಲಾಗಿ ಆತ ವೇಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾತ,ಕೆಲಸ ಇಲ್ಲದಾಗ ಮಸೀದಿಗಳಿಗೆ ಹೋಗಿ ಸ್ಪೀಚ್ ಮಾಡುತ್ತಿದ್ದ ಎಂದು ಮಾಧ್ಯಮಗಳಿಗೆ ಬೆಳಗಾವಿಯಲ್ಲಿ ಡಾ, ಎಸ್ಪಿ ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!