Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಚಿರಾಯು ಆಯುಷ ಥೆರೆಪಿ ಸೆಂಟರ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ

ಬೆಳಗಾವಿ: ನಗರ ಗಾಂಧಿನಗರದಲ್ಲಿರುವ ಚಿರಾಯು ಆಯುಷ ಥೆರೆಪಿ ಸೆಂಟರ ವತಿಯಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.ಗುಣಮಟ್ಟದ ಸೇವೆ, ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ಹಾಗು ಸಾರ್ವಜನಿಕರಿಗಾಗಿ ವಿಶೇಷ ಅರೋಗ್ಯ ಚಿಕಿತ್ಸಾ ಕಾರ್ಯಕ್ರಮಗಳಿಂದ ಚಿರಾಯು ಆಯುಷ ಥೆರೆಪಿ ಸೆಂಟರ ಆರಂಭವಾಗಿ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ ಸಾರ್ವಜನಿಕ ವಲಯದಲ್ಲಿ ಜನಪ್ರೀಯತೆ ಹೊಂದಿದೆ.
 ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಅರೋಗ್ಯ ತಪಾಸಣಾ ಶಿಬಿರ ಹಾಗೂ ವಿಶೇಷ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮನಿಪ್ರಸ್ಫ ಪಂಚಾಕ್ಷರ ಮಹಾಸ್ವಾಮಿಗಳು ಶ್ರೀಕುಮಾರೇಶ್ವರ ವಿರಕ್ತಮಠ,  ಶ್ರೀ ಶಿವಾನಂದ ಶಿವಾಚಾರ್ಯ ಹಾಗೂ ಶ್ರೀ ನೀಲಕಂಠ ಶಿವಾಚಾರ್ಯ ಸ್ವಾಮೀಗಳು ವಹಿಸಿದ್ದರು. ಈ ಸಂದರ್ಭದಲ್ಲಿ  ಬಿಜೆಪಿ ಮುಖಂಡರು ಹಾಗು ಮಾಜಿ ಶಾಸಕರಾದ ಸಂಜಯ ಪಾಟೀಲ, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡುಗನಟ್ಟಿ, ಭೂಪಾಲ ಅತ್ತು, ರವಿ ಕೊಟಬಾಗಿ, ಉದ್ಯಮಿ ಉಮೇಶ ಆಚಾರ್ಯ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ಚಿರಾಯು ಆಯುಷ ಥೆರೆಪಿ ಸೆಂಟರ ಸಂಸ್ಥೆಯ ಸಂಸ್ಥಾಪಕರಾದ ಡಾ.ರಾಮು ಪಂಡಿತ ಹಾಗೂ ಸೋಮು ಪಂಡಿತ ಅವರು ಕಳೆದ ಹಲವಾರು ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ಅನೇಕ ಆಯುರ್ವೇದಿಕ ವೈದ್ಯಕೀಯ ಸಂಸ್ಥೆಗಳನ್ನು ಹುಟ್ಟು ಹಾಕಿ ಆಯುರ್ವೇದ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ನುರಿತ ವೈದ್ಯ ಆಯುರ್ವೇದ ತಜ್ಞೆರು  ಮೂಲವ್ಯಾದಿ, ಚರ್ಮ ರೋಗ, ಸಂದು ಹಾಗೂ ಕೀಲು ನೋವಿಗಾಗಿ ಉಚಿತ ಅರೋಗ್ಯ ತಪಾಸಣೆ ಮಾಡಿದರು.ಚಿರಾಯು ಆಯುಷ ಥೆರೆಪಿ ಸೆಂಟರ ವತಿಯಿಂದ ಉಚಿತ ಔಷಧಿಗಳನ್ನು ನೀಡಲಾಯಿತು. ನೂರಾರು ಜನ ರೋಗಿಗಳು  ಈ ಉಚಿತ ಅರೋಗ್ಯ ತಪಾಸಣಾ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
TV24 News Desk
the authorTV24 News Desk

Leave a Reply

error: Content is protected !!