





ಬೆಳಗಾವಿ:
ಬೆಳಗಾವಿಯಲ್ಲಿ ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರು ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದ ನಿವಾಸಿ ಅನೀತಾ ನೀಲೇಶ್ ನೀಲದಕರ್(25) ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅನೀತಾ ಶವ ಅನುಮಾನಾಸ್ಪದವಾಗಿ ಸಿಕ್ಕ ಹಿನ್ನೆಲೆ ಅನೀತಾ ಮನೆಯವರು ಗಂಡ ನಿಲೇಶ್ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೆ ಅನೀತಾ ಹಾಗೂ ನೀಲೇಶ್ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ಫಿಜ್ಜಾ ಹಟ್ ಒಂದರಲ್ಲಿ ಕೆಲಸ ಮಾಡ್ತಿದ್ದ ಅನೀತಾ ಹಾಗೂ ನೀಲೇಶ್ ಪರಸ್ಪರ ಪ್ರೀತಿಸಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು ಎನ್ನಲಾಗಿದೆ. ಅನೀತಾ ಸಾವನ್ನಪ್ಪಿದ ಹಿನ್ನೆಲೆ, ಅನೀತಾ ಗಂಡನ ಮನೆಯ ಮುಂದೆ ಸಂಬಂಧಿರಕ ಆಕ್ರಂದಣ ಮುಗಿಲು ಮುಟ್ಟಿದೆ. ಗಂಡ ಹಾಗೂ ಗಂಡನ ಮನೆಯವರೆ ತಮ್ಮ ಮಗಳು ಅನೀತಾರನ್ನು ಕೊಲೆ ಮಾಡಿದ್ದಾರೆ ಎಂದು ಅನೀತಾ ಮನೆಯವರು ಆರೋಪಿಸಿದ್ದಾರೆ. ಇನ್ನು ಅನೀತಾ ಪತಿ ನೀಲೇಶನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯೂ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.








