ಜಿಲ್ಲೆಬೆಳಗಾವಿ

ಪಂಚಮಸಾಲಿಗಳ ಮೇಲಿನ ಲಾಠಿಚಾರ್ಜ್ ಪ್ರಕರಣ ಸರ್ಕಾರಕ್ಕೆ ಹಿನ್ನಡೆ

ಬೆಳಗಾವಿ:

ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ಲಾಠಿ ಚಾರ್ಜ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.ಸರ್ಕಾರ ಸಲ್ಲಿಸಿದ್ದ ಮರು ಮೇಲ್ಮನವಿಯನ್ನು ದ್ವಿಸದಸ್ಯ ಪೀಠ ವಜಾ ಮಾಡಿದೆ.
ಮೂರು ತಿಂಗಳ ಒಳಗಾಗಿ ನ್ಯಾಯಮೂರ್ತಿಗಳ ನೇತೃತ್ವದ ವರದಿ ಕೊಡುವಂತೆ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿತ್ತು. ಆ ಆದೇಶವನ್ನು ರದ್ದು ಮಾಡುವಂತೆ ಸರ್ಕಾರ ಹೈಕೋರ್ಟ್ ಗೆ ಮೇಲ್ಮನವಿಯನ್ನೂ ಸಹ ಸಲ್ಲಿಸಿತ್ತು. ಸಧ್ಯ ದ್ವಿಸದಸ್ಯ ಪೀಠದಿಂದ ಸರ್ಕಾರ ಸಲ್ಲಿಸಿದ ಅರ್ಜಿ ವಜಾ ಮಾಡಲಾಗಿದೆ
ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.ಇನ್ನು
ಹೈಕೋರ್ಟ್ ಆದೇಶಕ್ಕೆ ಬಸವ ಜಯಮೃತ್ಯುಂಜಯ ಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಅಥಣಿಯಲ್ಲಿ ಮಾತನಾಡಿದ ಅವರುಡಿಸೆಂಬರ್ 10 2024 ರಂದು ಸುವರ್ಣ ವಿಧಾನಸೌಧ ಮುಂದೆ ಲಾಟಿ ಚಾರ್ಜ್ ಮಾಡಲಾಗಿತ್ತು.ಸಿಎಂ ಸಿದ್ದರಾಮಯ್ಯ ಕುಮ್ಮಕ್ಕಿನಿಂದ ನಮ್ಮ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದರು
ಈ ವಿಚಾರವನ್ನು ಅಧಿವೇಶನದಲ್ಲಿ ನಮ್ಮ ಶಾಸಕರು ಚರ್ಚೆ ನಡೆಸಿದ್ದರು ಪ್ರತಿಭಟನೆಕಾರರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿತ್ತು.
ನಾನು ಸತ್ಯಾಗ್ರಹ ಮಾಡಿದರು ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ.ನಮ್ಮ ವಕೀಲ ಪರಿಷತನವರು ನ್ಯಾಯಾಲಯ ಮೊರೆ ಹೋಗಿದ್ದರು
ನಮ್ಮ ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪುರಸ್ಕಾರ ಮಾಡಿದ್ದಾರೆ.ಮೂರು ತಿಂಗಳಲ್ಲಿ ನ್ಯಾಯಮೂರ್ತಿ ನೇತೃತ್ವದ ವರದಿ ಕೊಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಆದರೆ ಸರ್ಕಾರ ಅದನ್ನು ಪಾಲಿಸುವುದು ಬಿಟ್ಟು ದ್ವಿಸದಸ್ಯ ಪೀಠಕ್ಕೆ ಆ ಆದೇಶದ ರದ್ದತಿಗೆ ಮರು ಮೇಲ್ಮನವಿಯನ್ನು ಸಲ್ಲಿಸಿತ್ತು ಹಿಂದೆ ಹೈಕೋರ್ಟ್ ನೀಡಿದ ಆದೇಶವನ್ನು ಮತ್ತೊಮ್ಮೆ ಎತ್ತಿ ಹಿಡಿದೆ ಆ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನೆಡೆಯಾಗಿದೆ ಎಂದರು.

TV24 News Desk
the authorTV24 News Desk

Leave a Reply