ಬೆಳಗಾವಿ:
ಬೆಳಗಾವಿಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ.ಏಕಾಏಕಿ ಎದೆ ನೋವಿನಿಂದ ಕುಸಿದು ಬಿದ್ದು ಯೋಧ ಸಾವನ್ನಪ್ಪಿರುವ ಘಟನೆ ನಡೆದಿದೆ.ಬೆಳಗಾವಿ ನಗರದ ಅನಗೋಳದ ಬಜಾರ್ ನಲ್ಲಿ ಘಟನೆ ನಡೆದಿದ್ದು ಯೋಧ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದು ಇಬ್ರಾಹಿಂ ದೇವಲಾಪುರ(37) ಮೃತಪಟ್ಟಿದ್ದಾನೆ.ಯೋಧ ಕುಸಿದು ಬೀಳುತ್ತಿದ್ದಂತೆ ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯತ್ತಿದ್ದಂತೆ ಯೋಧನ ಸಾವಿನ ಕುರಿತು ವೈದ್ಯರು ಖಚಿತಪಡಿಸಿದ್ದಾರೆ. ರಜೆಯ ಮೇಲೆ ಯೋಧ ಊರಿಗೆ ಬಂದಿದ್ದ ಎನ್ನಲಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಈವರೆಗೆ ಹೃದಯಾಘಾತಕ್ಕೆ ಒಟ್ಟು 8 ಜನ ಪ್ರಾಣ ತೆತ್ತಿದ್ದಾರೆ.

