ಬೆಳಗಾವಿ:
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ ಇನ್ನೂ ಸಹ ಮುಗಿದಿಲ್ಲ. ಆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಹಲವರು ಜೈಲೂಟ ತಿಂದು ಸಧ್ಯ ಬೇಲ್ ಮೇಲೆ ಹೊರಗಿದ್ದಾರೆ.ಸಧ್ಯ ಅಂತದೇ ಪ್ರಕರಣದಲ್ಲಿ ನಟ ದರ್ಶನಗೆ ಹಾಸ್ಯ ನಟ ಸಂಜು ಬಸಯ್ಯ ಮಾದರಿಯಾಗಿದ್ದಾರೆ. ವಿಜಯನಗರ ಮೂಲದ ಯುವಕನೋರ್ವ ನಟ ಸಂಜು ಬಸಯ್ಯ ಪತ್ನಿ ಪಲ್ಲವಿ ಸಂಜು ಬಸಯ್ಯಗೆ ಇನ್ಸಟಾಗ್ರಾಮ್ ನಲ್ಲಿ ಅಶ್ಲೀಲವಾಗಿ ಸಂದೇಶ ಹಾಗೂ ಅಶ್ಲೀಲ ಫೋಟೊಗಳನ್ನು ಕಳಿಸಿದ್ದ, ಇದನ್ನ ಗಮನಿಸಿದ ನಟ ಸಂಜು ಬಸಯ್ಯ ಕೂಡಲೇ ಅಶ್ಲೀಲ ಸಂದೇಶಗಳ ಸ್ಕ್ರೀನ್ ಶಾಟ್ ಪಡೆದು ಬೈಲಹೊಂಗಲ ಪೊಲೀಸರ ಮೊರೆ ಹೋಗಿದ್ದರು. ವಿಷಯ ತಿಳಿದ ಪೊಲೀಸರು ಶೀಘ್ರವೇ ಅಶ್ಲೀಲ ಸಂದೇಶ ಕಳಿಸಿದ ಯುವಕನನ್ನು ಠಾಣೆಗೆ ಕರೆಸಿ ಬುದ್ದಿ ಹೇಳಿದ್ದಾರೆ.ಅಶ್ಲೀಲ ಸಂದೇಶ ಕಳಿಸಿದ ಯುವಕ ವಿದ್ಯಾರ್ಥಿ ಎಂದು ತಿಳಿದ ನಟ ಸಂಜು ಬಸಯ್ಯ ಆತನಿಗೆ ಬುದ್ದಿವಾದ ಹೇಳಿ ವಾಪಸ್ ಕಳಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಅಂತದೇ ಪ್ರಕರಣಗಳು ಮರುಕಳಿಸುತ್ತಿರುವ ಈ ಸಂದರ್ಭದಲ್ಲಿ ನಟ ಸಂಜು ಬಸಯ್ಯ ಅವರ ತಾಳ್ಮೆ ಹಾಗೂ ಸಂಯಮ ಎಲ್ಲರಿಗೂ ಮಾದರಿಯಾಗಿದೆ. ಅಂದು ನಟ ದರ್ಶನ್ ಕೂಡ ಸಂಜು ಬಸಯ್ಯರಂತೆ ತಾಳ್ಮೆ ತಂದುಕೊಂಡಿದ್ದರೆ ನಟ ದರ್ಶನ ಜೈಲೂಟ ತಿನ್ನುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

