
ಬೆಳಗಾವಿ:
ಬೆಳಗಾವಿಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣಕ್ಕೆ ಚಿನ್ನ ಹಾಗೂ ಚೀಟಿ ವ್ಯವಹಾರದ ನಂಟು ಹತ್ತಿಕೊಂಡಿದೆ. ರಾಜು ಕುಡತರ್ಕರ್ ಎಂಬಾತನ ಟಾರ್ಚರ್ ಗೆ ಇಡೀ ಕುಟುಂಬ ಬಲಿಯಾಗಿದೆ ಎನ್ನಲಾಗುತ್ತಿದೆ.
ಚಿನ್ನ ತೆಗೆದುಕೊಂಡು ಹೋಗಿ ಮೋಸ ಮಾಡಿದ ರಾಜು ಮೋಸ ಮಾಡಿದ್ದಾನೆ ಜನರಿಂದ ತಂದಿದ್ದ ಚಿನ್ನವನ್ನ ರಾಜು ನಂಬಿ ಕೆಲಸ ಮಾಡಲು ನೀಡಿದ್ದೆ ಎಂದು ಸಂತೋಷ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ರಾಜುವಿನ ಬಳಿ ಚಿನ್ನ ವಿನ್ಯಾಸಗೊಳಿಸಲು ಮೃತ ಸಂತೋಷ್ ನೀಡಿದ್ದರು ಎನ್ನಲಾಗಿದೆ
ಅರ್ಧ ಕೆಜಿ ಚಿನ್ನ ತೆಗೆದುಕೊಂಡು ಹೋಗಿ ಮೋಸ ರಾಜು ಮೋಸ ಮಾಡಿದ್ದ ಆರೋಪ ಕೇಳಿ ಬಂದಿದೆ.
ಇತ್ತ ಚಿನ್ನ ಕೊಟ್ಟವರು ಸಂತೋಷ್ ಮನೆಗೆ ಬಂದು ವಾಪಾಸ್ ನೀಡುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ಒಂದು ಕಡೆ ಚಿನ್ನ ಕೊಟ್ಟವರು ಕಿರಿಕಿರಿ ಮಾಡಲು ಪ್ರಾರಂಭಿಸಿದ್ದರೆ ಇತ್ತ ಜನರ ಬಳಿ ಚಿನ್ನ ಪಡೆದು ರಾಜುವಿನ ಕೈಗೆ ಇಟ್ಟಿದ್ದ ಸಂತೋಷ್ ಗೆ ಮರಳಿ ಚಿನ್ನ ಕೊಡಲು ರಾಜು ಸತಾಯಿಸಿದ್ದಾನೆ. ಹೀಗಾಗಿ ಎರಡೂ ಕಡೆಯಿಂದ ಕಿರುಕುಳ ತಾಳಲಾರದೇ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತು ಎನ್ನಲಾಗಿದೆ.ತಾಯಿ ಮತ್ತು ತಂಗಿಯರಿಗೆ ಎರಡು ಗಂಟೆಗಳ ಕಾಲ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸಂತೋಷ್ ಕನ್ವಿನ್ಸ್ ಮಾಡಿದ್ದರು ಎನ್ನಲಾಗಿದೆ.
ಸಾವೇ ತಮಗೆ ಕೊನೆ ದಾರಿ ಅನ್ನೋದನ್ನ ಕುಟುಂಬಸ್ಥರಿಗೆ ಮನವರಿಕೆ ಮಾಡಿ ಬಳಿಕ ತನ್ನೊಟ್ಟಿಗೆ ತಂದಿದ್ದ ವಿಷವನ್ನ ಕುಟುಂಬಸ್ಥರಿಗೆ ನೀಡಿ ಬಳಿಕ ತಾನೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ವೇಳೆ ಸುನಂದಾ ವಿಷ ಕುಡಿಯುವುದಕ್ಕೆ ವಿರೋಧ ಮಾಡಿದ್ದಳು ಎನ್ನಲಾಗಿದೆ ಆಗ ಆಕೆಯನ್ನ ಬಿಟ್ಟು ಮೂರು ಜನ ಮೊದಲು ವಿಷ ಕುಡಿದಿದ್ದರು ಎನ್ನಲಾಗಿದೆ.ಎಲ್ಲರೂ ಹೋದ ಮೇಲೆ ತಾನೇನು ಮಾಡೋದು ಅಂತಾ ಕೊನೆಯಲ್ಲಿ ಸುನಂದಾ ಸಹ ವಿಷ ಸೇವನೆ ಮಾಡಿದ್ದರು ಅದೃಷ್ಟವಷಾತ್ ಸುನಂದಾ ಮಾತ್ರ ಬದುಕುಳಿದಿದ್ದು ದುರ್ದೈವ ಎಂಬಂತೆ ಮೂರು ಜನ ತೀರಿ ಹೋಗಿದ್ದಾರೆ.