ಬೆಳಗಾವಿ :ರಾಜಸ್ಥಾನ ಮೂಲದ ಹಾಲಿ ಎಂಕೆ ಹುಬ್ಬಳ್ಳಿ ನಿವಾಸಿಗಳಾದ ಲೋಹಿತಾಶ್ವ ಬಿಶ್ನೋಯಿ ಹಾಗು ರಾಜಕುಮಾರ ಬಿಶ್ನೋಯಿ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ
ಬೆಳಗಾವಿ ಆಟೋ ನಗರದಲ್ಲಿ ಅಫೀಮು ಮಾರಾಟ ಮಾಡುವಾಗ ಸಿಸಿಬಿ ಪೊಲೀಸರು ಜಾಲ ಬಿಸಿ ಬಂಧಿಸಿದ್ದಾರೆ
ಆರೋಪಿಗಳಿಂದ ೨.೭೦ ಲಕ್ಷ ಮೌಲ್ಯದ ೩೧೫ ಗ್ರಾಂ ಅಫೀಮು, ೨ ಮೊಬೈಲ್, ಸ್ವಿಫ್ಟ್ ಕಾರು ಹಾಗು ೩ ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.