ಜಿಲ್ಲೆಬೆಳಗಾವಿ

ಅಥಣಿ ಜಿಲ್ಲಾ ಮಾಡ್ಲಿಲ್ಲಂದ್ರ ನಾವ್ ವಿಜಯಪುರಕ್ ಸೇರ್ಕೊತಿವಿ ಬೆಳಗಾವಿ ಬ್ಯಾಡ ಬ್ಯಾಡ ನಮಗ: ಕುಮಟಳ್ಳಿ

ಬೆಳಗಾವಿ:
ಬೆಳಗಾವಿ ಜಿಲ್ಲಾ ವಿಭಜನೆ ವಿಚಾರಕ್ಕೆ ಸಂಬಂಧಪಟ್ಟಂತೆ
ಬೆಳಗಾವಿಯಲ್ಲಿ ಮಾಜಿ ಶಾಸಕ ಮಹೇಶ ಕುಮಟಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.ಈಗಾಗಲೇ ಜಿಲ್ಲಾ ವಿಭಜನೆ ವಿಚಾರವಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸ್ಪಷ್ಟನೆ ನೀಡಿದ್ದಾರೆ.ಜಿಲ್ಲಾ ವಿಭಜನೆ ಮಾಡಬೇಕಾಗಿ ಬಂದ್ರೆ ಅಥಣಿ ಕೂಡಾ ಜಿಲ್ಲಾ ಮಾಡಬೇಕು
ನಾವು ಕೂಡಾ ಅಥಣಿಯನ್ನ ಜಿಲ್ಲೆಯನ್ನಾಗಿ ಮಾಡಬೇಕು ಅಂತಾ ಪ್ರಸ್ತಾವಣೆ ಕೊಡತಾ ಇದ್ದೇವೆ.
ಅಥಣಿ ಕೂಡಾ ಸಾಕಷ್ಟು ಅಭಿವೃದ್ಧಿ ಆಗಿದೆ ಅಥಣಿ ಮಹಾರಾಷ್ಟ್ರದ ಗಡಿ ಹೊಂದಿಕೊಂಡಿದೆ ಬೆಳಗಾವಿ ಜಿಲ್ಲೆಯ ಕೊನೆ ಗಡಿ ನಮ್ಮ ಅಥಣಿ ಇದೆ.ಅಥಣಿಯಿಂದ ಕೊಟ್ಟಲಗಿ ಗ್ರಾಮ 40 ಕೀಮಿ ಇದೆ,ಹಾಗೇ ಅಥಣಿಯಿಂದ ಬೆಳಗಾವಿ 190 ಕಿಮೀ ಇದೆ ನನ್ನ ಮತಕ್ಷೇತ್ರ ಮಹಾರಾಷ್ಟ್ರ, ವಿಜಯಪೂರ ಹೊಂದಿಕ್ಕೊಂಡಿದೆ ಆಡಳಿತಾತ್ಮಕವಾಗಿ ಮಾತ್ರ ಬೆಳಗಾವಿ ಸಂಪರ್ಕ ಇದೆ ವ್ಯವಹಾರದ ವಿಚಾರವಾಗಿ ವಿಜಯಪುರ,ಮಹಾರಾಷ್ಟ್ರ ಸಂಪರ್ಕ ಹೊಂದಿದ್ದೇವೆ.
ಅಥಣಿ ಜಿಲ್ಲೆ ಆಗಲೇಬೇಕು ಮಾಡದೆ ಹೋದರೆ ನಾವು ವಿಜಯಪುರ ಸೇರ್ಪಡೆ ಆಗುತ್ತೆವೆ ಹೊರತು ಬೆಳಗಾವಿ ಸೇರಲ್ಲಾ ಅಥಣಿ ಜನರ ಪರಿಸ್ಥಿತಿ ಸರ್ಕಾರ ಅರ್ಥ ಮಾಡಿಕ್ಕೊಳ್ಳಬೇಕು ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಆಗ್ರಹಿಸಿದ್ದಾರೆ.

TV24 News Desk
the authorTV24 News Desk

Leave a Reply