ಬೆಳಗಾವಿ:
ಕೋಟಿ ದೇವರಿಗೆ ಕೈ ಮುಗಿದು ಪ್ರಾರ್ಥಿಸುವ ಬದಲು ತಂದೆ ತಾಯಿಗೆ ನಮಿಸಿ ಅಂತ ಹಿರಿಯರು ಹೇಳ್ತಾರೆ. ಆದರೆ ಬದಲಾಗ್ತಿರೋ ಅಧುನಿಕ ಜಗತ್ತು ಎತ್ತ ಸಾಗ್ತಿದೆ ಎನ್ನುವುದನ್ನು ವಿಚಾರ ಮಾಡಿದ್ರೆ ಎಂಥವರಿಗೂ ಸಹ ಮರುಕ ಹುಟ್ಟುತ್ತೆ.ಇಲ್ಲೊಬ್ಬ ತಂದೆ ಮಗ ಸೊಸೆಯ ಕಾಟ ತಾಳಲಾರದೆ ಕೃಷ್ಣಾ ನದಿಗೆ ಹಾರಿ ಪ್ರಾಣ ಬಿಡಲು ಯತ್ನಿಸಿದ ಘಟನೆ ನಡೆದಿದೆ.ಬೆಳಗಾವಿ ಮೂಲದ ಕೃಷ್ಣಪ್ಪ ಎಂಬ ವೃದ್ಧ ನಿನ್ನೆ ತಡರಾತ್ರಿ ಚಿಕ್ಕೋಡಿ ತಾಲೂಕಿನ ಮಾಂಜರಿ ಬಳಿ ಇರುವ ಮಾಂಜರಿ ಸೇತುವೆ ಮೇಲಿಂದ ಕೃಷ್ಣಾ ನದಿಗೆ ಹಾರಲು ಯತ್ನಿಸಿದಾಗ ಸ್ಥಳೀಯರು ಆತನನ್ನು ರಕ್ಷಿಸಿದ ಘಟನೆ ನಡೆದಿದೆ. 77 ವರ್ಷದ ಕೃಷ್ಣಪ್ಪ ಅವರಿಗೆ ಇಬ್ಬರು ಮಕ್ಕಳು. ಮಗ ಹಾಗೂ ಮಗಳಿಗೆ ಮದುವೆ ಮಾಡಿ ಅವರ ಜೀವನ ರೂಪಿಸಿದ ಕೃಷ್ಣಪ್ಪ ಅವರು ಸಧ್ಯ ಪ್ರಾಶ್ವವಾಯುವಿಗೆ ತುತ್ತಾಗುದ್ದಾರೆ. ಅನಾರೋಗ್ಯ ಪೀಡಿತರಾಗಿರುವ ತಂದೆ ಮಗ ಹಾಗೂ ಮಗಳಿಗೆ ಬೇಡವಾದ ಆರೋಪ ಕೇಳಿ ಬಂದಿದೆ. ಮಗ ಸೊಸೆಯ ಕಿರುಕುಳ ನೀಡ್ತಿರೋ ಆರೋಪವನ್ನು ಕೃಷ್ಣಪ್ಪ ಮಾಡಿದ್ದು ಮಗಳ ಮನೆಗೆ ಹೋದರೆ ಅಲ್ಲೂ ನೆಲೆ ಸಿಗದೆ ಕಡೆಗೆ ಸಾವೊಂದೆ ಪರಿಹಾರ ಎಂದು ಯೋಚಿಸಿ ಕೃಷ್ಣಪ್ಪ ನದಿಗೆ ಹಾರುವ ನಿರ್ಧಾರ ಕೈಗೊಂಡಿದ್ದರು. ಅವರಿವರ ಸಹಾಯ ಪಡೆದು ಬೆಳಗಾವಿಯಿಂದ ಹಾಗೋ ಹೀಗೋ ಕೃಷ್ಣಾ ನದಿಗೆ ಬಂದ ಕೃಷ್ಣಪ್ಪ ಮಾಂಜರಿ ಸೇತುವೆ ಮೇಲಿಂದ ಹಾರಲು ಯತ್ನಿಸಿದಾಗ ಅದನ್ನು ಗಮಿಸಿದ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಈ ವೇಳೆ ಕೃಷ್ಣಪ್ಪ ತನ್ನ ವೇದನೆಯನ್ನು ಸ್ಥಳೀಯರೊಂದಿಗೆ ಹಂಚಿಕೊಂಡಿದ್ದಾನೆ. ಬಳಿ ಕೃಷ್ಣಪ್ಪನನ್ನು ಸಮಾಧಾನ ಪಡಿಸಿದ ಸ್ಥಳೀಯರು ಆತನನ್ನು ಅಂಕಲಿ ಪೊಲೀಸರ ಸುಪರ್ಧಿಗೆ ನೀಡಿದ್ದಾರೆ. ಸಧ್ಯ ಕೃಷ್ಣಪ್ಪ ಅಂಕಲಿ ಪೊಲೀಸರ ವಶದಲ್ಲಿದ್ದು ಪೊಲೀಸರು ಮಗ ಹಾಗೂ ಸೊಸೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ನಡೆದ ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯರು ಕೃಷ್ಣಪ್ಪನ ಸಲುವಾಗಿ ಮಮ್ಮಲ ಮರುಗುತ್ತಿದ್ದಾರೆ.


