Uncategorized

ಆರ್ ಎಸ್ ಎಸ್ ಬೈಠಕ್ ನಲ್ಲಿ ಎನೇನು ಅವಲೋಕಿಸಲಾಯ್ತು ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಮಾಹಿತಿ!

ಬೆಳಗಾವಿ:

ಬೆಳಗಾವಿಯಲ್ಲಿ ನಡೆದ ಆರ್ ಎಸ್ ಎಸ್ ವಾರ್ಷಿಕ ರಾಷ್ಟ್ರೀಯ ಪ್ರಾಂತ ಪ್ರಚಾರ ಬೈಠಕ್ ಅಂತ್ಯವಾಗಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವಾತ್, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಪ್ರಮುಖರು ಈ ಬೈಠಕ್ ನಲ್ಲಿ ಭಾಗಿಯಾಗಿದ್ದರು.
ದೇಶದ 226 ಪ್ರಚಾಕರು ಸೇರಿ ದೇಶದ 83 ಸಂಘ ಶಿಕ್ಷಾ ವರ್ಗ 12 ಕಾರ್ಯಕರ್ತ ವಿಕಾಸ ವರ್ಗಗಳು ಭಾಗಿಯಾಗಿದ್ದವು.
ಬೈಠಕ್ ನಲ್ಲಿ ತರಬೇತಿ ಪಡೆದ 18, 842 ಸ್ವಯಂ ಸೇವಕರು
ಸಂಘದ ಕಾರ್ಯ ಪದ್ಧತಿ,ಗ್ರಾಮ ವಿಕಾಸ, ಕುಟುಂಬ ಪ್ರಭೊಧನೆ, ವಿಪತ್ತು ನಿರ್ವಹಣೆ,ಪರಿಸರ ಸಂರಕ್ಷಣೆ ಕುರಿತು ಚರ್ಚೆ
ಪ್ರಸ್ತುತ ದೇಶ ಸನ್ನಿವೇಶಗಳ ಕುರಿತು ಬೈಠಕ್ ನಲ್ಲಿ ಚರ್ಚೆಯಾಗಿದೆ ಎಂದು ಆರ್ ಎಸ್ ಎಸ್ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.ಅಲ್ಲದೇ ದೇಶಾದ್ಯಂತ ಜನಸಂಖ್ಯೆ ಅಸಮತೋಲನ, ಡ್ರಗ್ಸ್ ದುಷ್ಪರಿಣಾಮ ಬಗ್ಗೆ ಬೈಠಕ್ ನಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಅವರು ಹೇಳಿದರು.ರಾಮ ಮಂದಿರ ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಣಿಗೆ ಹಣ ಅವ್ಯಾಹಾರದ ಬಗ್ಗೆ ಬೈಠಕ್ ನಲ್ಲಿ ಚರ್ಚೆಯಾಗಿದ್ದು ಅವ್ಯವಾಹರದ ಘಟನೆ ಬಗ್ಗೆ ಸಂಘವು ದುಖಃ ವ್ಯಕ್ತಪಡಿಸಿದೆ.ಪ್ರಕರಣ ಕುರಿತು ಎಸ್ ಐ ಟಿ ತನಿಖೆಯ ನಿರ್ಣಾಯಕ ಹಂತ ತಲುಪುವ ವಿಶ್ವಾಸ ಇದ್ದು ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಲು ತೀರ್ಮಾಣ ಮಾಡಲಾಗಿದೆ ಎಂದರು.ಅಲ್ಲದೇ ರಾಮ ಭಕ್ತರ ಶ್ರದ್ಧೆಗೆ ಧಕ್ಕೆಯಾಗಂತೆ ಕಮೀಟಿ ನಡೆಸಿಕೊಂಡು ಹೋಗಲು ಬೈಠಕ್ ನಲ್ಲಿ ಚರ್ಚೆಯಾಗಿದೆ ಎಂದು ಅವರು ತಿಳಿಸಿದರು.

TV24 News Desk
the authorTV24 News Desk

Leave a Reply