ಕ್ರೈಂಜಿಲ್ಲೆಬೆಳಗಾವಿ

ಕುಡಿದ‌ ಮತ್ತಲ್ಲಿ ದೇವಸ್ಥಾನಕ್ಕೆ‌ ಕಲ್ಲೆಸೆದ ಆಸಾಮಿ?

ಕುಡಿದ ನಶೆಯಲ್ಲಿ‌ ವ್ಯಕ್ತಿಯೋರ್ವ ದೇವಸ್ಥಾನಕ್ಕೆ ಕಲ್ಲೆಸೆದ ಘಟನೆ ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ನಡೆದಿದೆ.‌ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇವಸ್ಥಾನಕ್ಕೆ ಆಸಾಮಿ ಕಲ್ಲೆಸೆದು ಪರಾರಿಯಾಗುತ್ತಿದ್ದ ವೇಳೆ ಸ್ಥಳೀಯರೇ ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಬಳಿಕ‌ ಪೊಲೀಸರಿಗೆ ಒಪ್ಪಿಸಿದ್ದಾರೆ. ದೇವಸ್ಥಾನಕ್ಕೆ ಕಲ್ಲೆಸೆದ ಆರೋಪಿಯನ್ನು ಯಾಶೀರ್ ಎಂದು ಗುರುತಿಸಲಾಗಿದೆ. ಯಾಶೀರ್ ಬೆಳಗಾವಿಯ ಉಜ್ವಲ್ ನಗರದ ನಿವಾಸಿ ಎನ್ನಲಾಗುತ್ತಿದೆ. ಈ ಹಿಂದೆ ಹೋಳಿ ಹಬ್ಬದ ದಿನದಂದು ಯಾರೋ ಒಬ್ಬ ಕಿಡಿಗೇಡಿ ಬುರ್ಕಾ ರೀತಿಯ ಬಟ್ಟೆ ಧರಿಸಿ ಡಾನ್ಸ್ ಮಾಡಿದ್ದನು. ಅದನ್ನು ಸಹಿಸಲಾಗದೆ ಯಾಶೀರ್ ಈ ರೀತಿ ಮಾಡಿದ್ದಾನೆ.‌ಎನ್ನಲಾಗಿದೆ. ಇನ್ನು ಘಟನೆ ಮಡೆಯುತ್ತಿದ್ದಂತೆ ಪಾಂಗುಳ ಗಲ್ಲಿಯಲ್ಲಿ ಜನೋಸ್ತೋಮವೇ ನೆರೆದಿತ್ತು.‌ದೇವಸ್ಥಾನಕ್ಕೆ ಕಲ್ಲೆಸೆದು ಕೋಮು ಸೌಹಾರ್ದಕ್ಕೆ ದಕ್ಕೆ ತಂದ ಯಾಶೀರ್ ನನ್ನು ಸ್ಥಳೀಯರೇ ಪೊಲೀಸರಿಗೆ ಒಪ್ಪಿಸಿದ್ದಾರೆ.‌ತಡರಾತ್ರಿ ಸ್ಥಳಕ್ಕಾಗಮಿಸಿದ ಮಾರ್ಟೇಕ್ ಠಾಣೆ ಪಿ ಎಸ್ ಐ ವಿಠ್ಠಲ್ ಹಾವನ್ನವರ್ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದ್ದು ಸ್ಥಳದಲ್ಲಿ ಮುಂಜಾಗೃತಾ ಕ್ರಮವಾಗಿ ಒಂದು ಕೆ ಎಸ್ ಆರ್ ಪಿ ತುಕಡಿಯನ್ನು ಪೊಲೀಸರು ನಿಯೋಜನೆ ಮಾಡಿದ್ದಾರೆ. ಸದಾ ಭಾಷಾ ಸಂಘರ್ಷದ‌ ಬೇಗುದಿಯಲ್ಲಿ ಬೇಯುತ್ತಿದ್ದ ಬೆಳಗಾವಿ ಇತ್ತಿಚಿಗೆ ಇಂತಹ ಘಟನೆಗಳಿಂದ ಕೋಮು ಸಂಘರ್ಷಕ್ಕೂ ಸಾಕ್ಷಿಯಾಗುತ್ತಿದೆ.‌ಸಧ್ಯ ಆರೋಪಿಯನ್ನು ಬೆಳಗಾವಿ ಮಾರ್ಕೇಟ್ ಠಾಣೆ ಪೊಲೀಸರು ಬಂಧಿಸಿದ್ದು ವಿಚಾರಣೆ ಮುಂದುವರೆಸಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!