ಬೆಳಗಾವಿ:
ಬೆಳಗಾವಿಯಲ್ಲಿ ಮತ್ತೊಂದು ಖಾಸಗಿ ಫೈನಾನ್ಸ್ ಕರ್ಮಖಾಂಡ ಹೊರಬಿದ್ದಿದೆ. ಬೆಳಗಾವಿಯ ಟಿಳಕವಾಡಿಯಲ್ಲಿರುವ ಅಪೇಕ್ಸ್ ಬಿಜ್ ಕಾರ್ಫ್ ಎಲ್ ಎಲ್ ಪಿ ಎಂಬ ಖಾಸಗಿ ಫೈನಾನ್ಸ್ ವಿರುದ್ಧ ಹೂಡಿಕೆದಾರರು ಪ್ರತಿಭಟನೆ ನಡೆಸಿದ ಘಡನೆ ನಡೆದಿದೆ.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದ ಸಂತ್ರಸ್ಥರು ನ್ಯಾಯ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಖಾಸಗಿ ಫೈನಾನ್ಸ್ ವಿರುದ್ಧ ಸುಮಾರು 165 ಕೋಟಿ ರೂ ವಂಚನೆಯ ಆರೋಪವನ್ನು ಮಾಡಿರುವ ಸಂತ್ರಸ್ಥರು ಸುಮಾರು 3500 ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಲಾಗಿದೆ.4 ಪರ್ಸಂಟ್ ಬಡ್ಡಿ ಆಮಿಷ ತೋರಿಸಿ ಹಣ ಸಂಗ್ರಹ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕಂಪನಿಯ ಮಾಲೀಕರಾದ ಕಾಶೀನಾಥ ವಾಗ್ಮೂರೆ ಮತ್ತು ಗಣೇಶ್ ಭಂಡಾರಿ ಎನ್ನುವವರು ಹಣ ಸಂಗ್ರಹಿಸಿಕೊಂಡು ದುಬೈ ಓಡಿಹೋಗಿದ್ದಾರೆ ಎಂದು ಸಂತ್ರಸ್ಥರು ಆರೋಪ ಮಾಡಿದ್ದಾರೆ.
ಮಾಲೀಕರು ದುಬೈಗೆ ಓಡಿ ಹೋಗಿದ್ದು ನಮಗೆ ಸರಿಯಾಗಿ ಪ್ರತಿಕ್ರಿಯೇ ನೀಡುತ್ತಿಲ್ಲ. ಎಲ್ಲೋ ಕುಳಿತು ಕೇವಲ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ.
ಬೆಳಗಾವಿಯ ಟಿಳಕವಾಡಿಯಲ್ಲಿರುವ ಖಾಸಗಿ ಫೈನಾನ್ಸ್ ಕಂಪನಿಯು ಜಿಲ್ಲಾಡಳಿತದ ಬಿಗಿ ಕ್ರಮದ ಮಧ್ಯೆಯೂ ಇಷ್ಟೊಂದು ಪ್ರಮಾಣದ ಹಣ ಹೂಡಿಕೆ ಮಾಡಿಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.ನಮ್ಮದುಡ್ಡು ನಮಗೆ ಕೊಡಿಸಿಕೊಡಿ ಎಂದು ಸಂತ್ರಸ್ಥರ ಆಗ್ರಹಿಸಿದ್ದು ಕಾಶೀನಾಥ ವಾಗ್ಮೂರೆ
ಗಣೇಶ ಭಂಡಾರಿ ಎನ್ನುವವರ ಮೇಲೆ ಕ್ರಮ ಕೈಗೊಳ್ಳೇಬೇಕು ಎಂದು ಆಗ್ರಹಿಸಿದ್ದಾರೆ.ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












