ಬೆಳಗಾವಿ

ಕರೀಂ ತೆಲಗಿ ಅಳಿಯ ಇರ್ಫಾನ್ ಲೋಕಸಮರದ ಕಣದಲ್ಲಿ..!

ಕರೀಂ ಲಾಲಾ ತೆಲಗಿ ಮಾಡಿರುವ ಕೆಲಸಗಳು ಇರ್ಫಾನ್ ತಾಳಿಕೋಟಿಗೆ ವರದಾನವಾಗಲಿವೆಯಾ..?
ಖಾನಾಪುರ:ಕರಾವಳಿಯ ಇತರ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಶರವೇಗದಲ್ಲಿ ಬೆಳೆಯುತ್ತಿದ್ದರೆ, ಅಲ್ಲೇ ಪಕ್ಕದಲ್ಲಿರುವ ಕಡಲತೀರ, ಮಲೆನಾಡು, ದಟ್ಟಾರಣ್ಯ ತನ್ನೊಳಗೆ ಇಟ್ಟುಕೊಂಡಿರುವ ಉತ್ತರ ಕನ್ನಡ ಮಾತ್ರ ಮುದುಡಿಕೊಂಡು ಕುಳಿತಿದೆ. ಅಲ್ಲೊಂದು, ಇಲ್ಲೊಂದು ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗಳು ನಡೆದದ್ದು ಬಿಟ್ಟರೆ, ಕೇಂದ್ರದಿಂದ ಜನೋಪಯೋಗಿ ಶಾಶ್ವತ ಯೋಜನೆಗಳು ಜಾರಿಗೊಂಡದ್ದು ಕಡಿಮೆ. ಆದರೆ ಕರಾವಳಿಯ ಇತರ ಜಿಲ್ಲೆಗಳಂತೆ ಇಲ್ಲಿಯೂ ಅಭಿವೃದ್ಧಿಗಿಂತ ಮೊದಲು ಭಾವನಾತ್ಮಕ ವಿಚಾರಧಾರೆಗೆ ಪ್ರಥಮ ಪ್ರಾಶಸ್ತ್ಯ ಇರುವ ಕಾರಣ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರ ಹೊಂದಿರುವ ಕೆನರಾ ಲೋಕಸಭಾ ಕ್ಷೇತ್ರವೂ ಈಗ ಸುದ್ದಿಯಲ್ಲಿದೆ ಏಕೆಂದರೆ ಟಿಕೆಟ್ ಆಕಾಂಕ್ಷಿ ಕರೀಂ ಲಾಲಾ ತೆಲಗಿ ಅಳಿಯ ಯುವ ಮುಖಂಡ ಸಮಾಜ್ ಸೇವಕ ಇರ್ಫಾನ್ ತಾಳಿಕೋಟಿ ತಮ್ಮ ಎಲ್ಲ ತಯ್ಯಾರಿಯೊಂದಿಗೆ ಚುನಾವಣಾ ಅಖಾಡದಲ್ಲಿ ದುಮುಕಿದ್ದಾರೆ. ಕ್ಷೇತ್ರದಲ್ಲಿ ಫುಲ್ ಆಕ್ಟಿವ ಆಗಿ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ.

ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು ಲೋಕಸಭೆ ಟಿಕೆಟ್ ಪಡೆಯಲು ಘಟಾನುಘಟಿ ನಾಯಕರುಗಳು ಟಿಕೆಟ್ ಪಡೆಯಲು ತಮ್ಮ ತಮ್ಮ ಹೈ ಕಮಾಂಡ್ ಗೆ ದುಂಬಾಲು ಬಿದ್ದಿದ್ದು ಚುನಾವಣಾ ಕಣ ರಂಗೇರುತ್ತಾ ಸಾಗಿದೆ ಇನ್ನೂ ಬೆಳಗಾವಿ ಜಿಲ್ಲೆಯ ರಾಜಕಾರಣ ಇಡೀ ರಾಜ್ಯದಲ್ಲೇ ಕುತೂಹಲ ಕೆರಳಿದ್ದು ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿದ್ದು ಆಯಾ ಪಕ್ಷಗಳ ಟಿಕೆಟ್ ಪಡೆಯಲು ಮುಖಂಡರು ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದು ಯಾರಿಗೆ ಹೈಕಮಾಂಡ್ ಮಣೆ ಹಾಕುತ್ತೆ ನೋಡಬೇಕಾಗಿದೆ.

ಇತ್ತ ಕಾಂಗ್ರೆಸ್ ನಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರು ಬಹುತೇಕ ಪಕ್ಕಾ ಆಗಿದ್ದು ಬಿಜೆಪಿ ಟಿಕೆಟ್ ಮಾತ್ರ ಇನ್ನೂ ಗೌಪ್ಯವಾಗಿದ್ದು ಅಂತಿಮ ಹಂತದಲ್ಲಿ ಬಿಜೆಪಿ ಟಿಕೆಟ್ ಯಾರಿಗೆ ಒಲಿಯಲಿದೆ ಎಂದು ಕ್ಷೇತ್ರದ ಜನ ಕಾತುರದಿಂದ ಕಾಯುವಂತಾಗಿದೆ ಇನ್ನೂ ಈ ಹಿಂದಿನ ಕಾಂಗ್ರೆಸ್ ಟಿಕೆಟ್ ವಂಚಿತ ಕರೀಂ ಲಾಲಾ ತೆಲಗಿ ಅಳಿಯ ಇರ್ಫಾನ್ ತಾಳಿಕೋಟಿ ಅವರ ಹೆಸರು ಅಸಾವುದ್ದೀನ್ ಓವೈಸಿಯ MIMನಿಂದ ಟಿಕೆಟ್ ಕೊಡಬೇಕೆಂದು ತಾಲ್ಲೂಕಿನ ಮುಸ್ಲಿಂ ಸಮುದಾಯದಲ್ಲಿ ಚರ್ಚೆ ಕೇಳಿಬರುತ್ತಿದ್ದು ತೀವ್ರ ಕುತೂಹಲ ಮೂಡಿಸಿದೆ.

ಜೆಡಿಎಸ್ ಬಿಜೆಪಿ ಮೈತ್ರಿಯಿಂದ ತಾಲೂಕಿನ ಅಲ್ಪಸಂಖ್ಯಾತ ಹಾಗೂ ಜೆಡಿಎಸ್ ಕಾರ್ಯಕರ್ತರು ಅತಂತ್ರವಾಗಿದ್ದು ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಾರಾ ಅಥವಾ ಒಂದು ವೇಳೆ ಇರ್ಫಾನ್ ತಾಳಿಕೋಟಿ ಅವರಿಗೆ ಟಿಕೆಟ್ ಸಿಕ್ಕರೆ ಅವರ ಕೈ ಹಿಡಯುತ್ತಾರಾ ಕಾದುನೋಡಬೇಕಿದೆ. ಇನ್ನೂ ಖಾನಾಪುರ ತಾಲೂಕಿನಲ್ಲಿ ನಾಲ್ಕು ಲಕ್ಷ ಮುಸ್ಲಿಂ ಮತದಾರರಿದ್ದು ಇವರ ವಿಶ್ವಾಸ ಗಳಿಸುವಲ್ಲಿ ಇರ್ಪಾನ್ ತಾಳಿಕೋಟಿ ಯಶಸ್ವಿಯಾಗುತ್ತಾರೆ ಕಾದುನೋಡಭೆಕಿದೆ.

ಕರೀಂ ಲಾಲಾ ತೆಲಗಿ ತನ್ನ ಜೀವನ ಅವಧಿಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರಿಗೆ ಪವಿತ್ರ ಹಜ್ ಯಾತ್ರೆ ಮಾಡಿಸಿದ್ದಾರೆ ಹಾಗೆ ಬಹಳಷ್ಟು ಮಂದಿರಗಳನ್ನು ಜೀರ್ಣೋದ್ದಾರ ಮಾಡಿಸಿದ್ದಾರೆ. ಖಾನಾಪುರ ನಗರದ ಶಿವಾಜಿ ಕಿಲ್ಲಾ ಮಾಡುವಾಗ ದೇಣಿಗೆ ನೀಡಿ ಭಾವೈಕ್ಯತೆಗೆ ತಾಲೂಕಾದ್ಯಂತ ಹೆಸರು ವಾಸಿಯಾಗಿದ್ದರು.

ಇರ್ಫಾನ್ ಅವರ ಮಾವ ಕರೀಂ ಲಾಲಾ ಅವರ ದಾರಿಯಲ್ಲೇ ನಡೆಯುತ್ತಿರುವ ಅಳಿಯ ಕರೀಂಲಾಲಾ ಅವರ ಜೀವಿತಾವಧಿಯಲ್ಲಿ ಖಾನಾಪುರ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸಲು ಸುಮಾರು ನಲವತ್ತಕ್ಕೂ ಹೆಚ್ಚು ಬೋರವೆಲ್ಲಗಳನ್ನ ಕೊರೆಸಿ ಅಧುನಿಕ ಭಗೀರಥ ಎನಿಸಿಕೊಂಡಿದ್ದರು ಅದೇ ರೀತಿ ಅವರ ಅಳಿಯ ಇರ್ಫಾನ್ ತಾಳಿಕೋಟಿ ಕೂಡ ಜನಸೇವೆಗೆ ಒಂದು ಕೈ ಮುಂದೆಯಿದ್ದು ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಸತತ ಪ್ರಯತ್ನದಿಂದ ಗುಂಜಿಯ ಮರಾಠಿ ಶಾಲೆಗೆ ನೀರಿನ ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!