ಬೆಳಗಾವಿ: ಕಾವೇರಿ ವಿಚಾರವಾಗಿ ವಿವಿಧ ಕನ್ನಡ ಪರ ಹಾಗೂ ರೈತ ಪರ ಸಂಘಟನೆ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗಾವಿ ನಗರದಲ್ಲಿ ಕನ್ನಡ ಹೋರಾಟಗಾರ ಬಾಳಾಸಾಹೇಬ ಉದಗಟ್ಟಿ ಅವರ ನೇತೃತ್ವದಲ್ಲಿ ರಕ್ತ ಕೊಟ್ಟೇವು ಕಾವೇರಿ ನೀರು ಬಿಡೆವು ಎಂದು ನೇರ ಸಂದೇಶ ಪ್ರಧಾನಿ ನರೇಂದ್ರ ಮೋದಿಗೆ ಸಾರಲು ನಗರದ ಸಮಾಜ ಸೇವಕ ಹಾಗೂ ಅಮ್ಮ ಪ್ರತಿಷ್ಠಾನ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವ್ಯಾಪಾರ ಘಟಕದ ಅಧ್ಯಕ್ಷ ಬಾಳಾಸಾಹೇಬ ಉದಗಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಕಾವೇರಿ ನಮ್ಮದು, ನೀರು ಕೊಡಬೇಡಿ. ಸರ್ಕಾರದ ವಿರುದ್ಧ ತೀವ್ರಗೊಂಡ ಪ್ರತಿಭಟನೆ ನಡೆಸಿದ ಅವರು ಕರ್ನಾಟಕ ಬಂದ್ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಕರ್ನಾಟಕ ಚಾಲಕರ ಒಕ್ಕೂಟ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಅರುಣ ಪಾಟೀಲ ಬೆಂಬಲ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಅನೇಕ ಕನ್ನಡ ಹೋರಾಟಗಾರರು ಉಪಸ್ಥಿತರಿದ್ದರು.
tv24plus.in > Blog > ಜಿಲ್ಲೆ > ಬೆಳಗಾವಿ > ರಕ್ತದಲ್ಲಿ ಪತ್ರ ಬರೆದ ಕನ್ನಡ ಹೋರಾಟಗಾರ..!
the authorTV24 News Desk
All posts byTV24 News Desk
Leave a reply








