ಕ್ರೈಂಬೆಳಗಾವಿ

ಕಾರು ಬಸ್ ಮಧ್ಯೆ ಭೀಕರ ಅಪಘಾತ ಮೂವರು ಸ್ಥಳದಲ್ಲಿಯೇ ಸಾವು!

ಬೆಳಗಾವಿ:

ಕಾರು ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರುಗುಂಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೆ ಎಸ್ ಆರ್ ಟಿ ಸಿ ವಿಜಯೊಉಯ ಡಿಪೋಗೆ ಸೇರಿದ ಬಸ್ ಹಾಗೂ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಬಸ್ ಎರಡೂ ಮುಖಾಮುಖಿ ಡಿಕ್ಕಿಯಾಗಿವೆ. ಕಾರು ಮಹಾರಾಷ್ಟ್ರದ ಕೊಲ್ಹಾಪುರದಿಂದ ಅಫ್ಜಲ್ ಪುರಕ್ಕೆ ಹೊರಟಿತ್ತು ಎನ್ನಲಾಗಿದೆ. ಇನ್ನು ಅಥಣಿ ಕಡೆಯಿಂದ ಕಾಗವಾಡ ಮಾರ್ಗವಾಗಿ ಮೀರಜ್ ಗೆ ಬಸ್ಸು ಹೊರಟಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಕಲಬುರ್ಗಿ ಜಿಲ್ಲೆಯ ಅಫ್ಜಲಪುರ ಮೂಲದ ರಾಹುಲ್,ಗಿರೀಶ್, ಹಾಹೂ ಸಂಗಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಾಧಿಕಾ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.ರಾಧಿಕಾ ಹಾಗೂ ಬಸ್ಸನಲ್ಲಿದ್ದ ಗಾಯಾಳುಗಳನ್ನು ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆಂದು ರವಾಣಿಸಲಾಗಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply