Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಅಮ್ಮ ಪ್ರತಿಷ್ಠಾನ 20 ವರ್ಷ ಸಮಾಜ ಸೇವೆಯಲ್ಲಿ..!  

ದೇಶ ವಿದೇಶದಲ್ಲಿ ಅಮ್ಮ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ  

ಬೆಳಗಾವಿ: ಅಮ್ಮ ಪ್ರತಿಷ್ಠಾನ ಬೆಳಗಾವಿ ಕಳೆದ 20 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿದೆ. ಅಮ್ಮ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಾಳಾಸಾಹೇಬ ಉದಗಟ್ಟಿ ಅವರ ಅಭಿಮಾನಿ ಬಳಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಅವರ ತಾಯಿ ತಂದೆಯ ಹೆಸರಿನಲ್ಲಿ ಸಮಾಜದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ಕೊಡುತ್ತಾ ಬಂದಿದ್ದಾರೆ. ಇದಲ್ಲದೆ ಕರೋನಾ ಮಾಹಾಮಾರಿ ಸಮಯದಲ್ಲಿ ಬಡವರಿಗೆ ಆಹಾರ ಕೀಟ ಹಾಗೂ ರೈತರಿಗೆ ಮಾಸ್ಕ ನೀಡುವ ಮೂಲಕ ಜಿಲ್ಲೆಯಲ್ಲಿ ಮೆಚ್ಚುಗೆಯ ಕೆಲಸ ಮಾಡಿದರು. ಅವರ ತಂದೆ ತಾಯಿ ತಿರಿ ಹೋಗಿ ಇಂದಿಗೆ 21 ವರ್ಷ ಗತಿಸಿದವು, ಅಂದಿನಿಂದ ಇಲ್ಲಿವರೆಗೆ ತಾಯಿ ತಂದೆಯ ನೆನಪಿನಲ್ಲಿ ಪ್ರತಿ ವರ್ಷ ದೇಹದಾನ, ನೇತ್ರದಾನ  ರಕ್ತದಾನ ಶಿಬಿರ, ಅರೋಗ್ಯ ತಪಾಸಣೆ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಬಡ ಹೆಣ್ಣು ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕ ವರ್ಗಕ್ಕೆ ವಸ್ತ್ರದಾನ ಮಾಡುತ್ತಾ ಬಂದಿದ್ದಾರೆ. ಇದು ಬೆಳಗಾವಿ ಜಿಲ್ಲೆ ಸೀಮಿತವಾಗದೆ ರಾಜ್ಯ, ರಾಷ್ಟ್ರ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಮ್ಮ ಪ್ರತಿಷ್ಠಾನ ಪ್ರಶಸ್ತಿ ಕಾರ್ಯಕ್ರಮ ಮಾಡಿ ತಾಯಿ ತಂದೆಯ ಹೆಸರು ಹೆಚ್ಚು ಹಸಿರಾಗಿ ಉಳಿಸಿಕೊಂಡು ಬಂದಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!