ಬೆಳಗಾವಿ:
ಲೋಕಾಪುರ ಧಾರವಾಡ ರೈಲು ಮಾರ್ಗವನ್ನು ರಾಮದುರ್ಗ ಮಾರ್ಗವಾಗಿ ಸವದತ್ತಿ ಯಲ್ಲಮ್ಮ ಹಾಗೂ ಕಿತ್ತೂರು ಮಾರ್ಗವಾಗಿ ಚಲಿಸಲು ಅನುವು ಮಾಡಿಕೊಡಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ( ನಾರಾಯಣಗೌಡ ಬಣ) ಮನವಿ ಸಲ್ಲಿಸಿದರು. ಕಾಮಗಾರಿ ಹಂತದಲ್ಲಿರುವ ಬಾಗಲಕೋಟೆ ಲೋಕಾಪುರ ರೈಲು ಮಾರ್ಗ ಧಾರವಾಡಕ್ಕೆ ಬಂದು ತಲುಪುತ್ತದೆ. ಅದನ್ನು ರಾಮದುರ್ಗ ಮಾರ್ಗವಾಗಿ ಬದಲಾಯಿಸಿ ಸವದತ್ತಿ ಯಮ್ಮಲ್ಲ ಕ್ಷೇತ್ರ ಹಿಡಿದುಕೊಂಡು ಕಿತ್ತೂರು ಮಾರ್ಗವಾಗಿ ಧಾರವಾಡಕ್ಕೆ ಸೇರುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಕೇಂದ್ರ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಕನಸಾಗಿಯೇ ಉಳಿದಿರುವ ರಾಮದುರ್ಗ, ಬೈಲಹೊಂಗಲ್,ಹಾಗೂ ಸವದತ್ತಿ ಜನರಿಗೆ ರೈಲ್ವೆ ಕನಸನ್ನು ನನಸು ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಕರವೇ ಬೈಲಹೊಂಗಲ ಅಧ್ಯಕ್ಷ ನ ವಿಠ್ಠಲ್ ಕಡಕೋಳ, ಸವದತ್ತಿ ಕರವೇ ತಾಲೂಕು ಅಧ್ಯಕ್ಷ ಭೀಮಶಿ ಕ್ಯೂಡಿ,ಚನ್ನಮ್ಮನ ಕಿತ್ತೂರಿನ ಕರವೇ ಅಧ್ಯಕ್ಷರಾದ ರುದ್ರಗೌಡ ಪಾಟೀಲ್ ಹಾಗೂ ಕರವೇ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


