ಧಾರವಾಡಬೆಳಗಾವಿ

ಮೈಸೂರು-ಧಾರವಾಡ ರೈಲು ಬೆಳಗಾವಿಯವರೆಗೆ..!

ಬೆಳಗಾವಿ ಜನರಿಗೆ ಸಿಹಿಸುದ್ದಿ ಸಿಕ್ಕಿದೆ
 ಮೈಸೂರು-ಧಾರವಾಡ ರೈಲನ್ನು ಬೆಳಗಾವಿಯವರೆಗೂ ಸೆಪ್ಟೆಂಬರ್ 26 ರಿಂದ ಜಾರಿಗೆ ಬರುವಂತೆ ವಿಸ್ತರಿಸಲಾಗಿದೆ.  ಈ ಬಗ್ಗೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, MYS-DWR-MYS ರೈಲು ಇನ್ಮುಂದೆ MYS-BGM-MYS ಎಕ್ಸ್‌ಪ್ರೆಸ್ ರೈಲಾಗಿ ವಿಸ್ತರಿಸಲಾಗಿದೆ. ಮೈಸೂರಿನಿಂದ ರಾತ್ರಿ 10-30 ಕ್ಕೆ ಹೊರಡುವ 17301 ರೈಲು, ಬೆಳಗಾವಿಗೆ ಬೆಳಗ್ಗೆ 10-45 ಕ್ಕೆ ತಲುಪಲಿದೆ. ಇನ್ನು ಬೆಳಗಾವಿಯಿಂದ ಹೊರಡುವ 17302 ರೈಲು ರಾತ್ರಿ 8 ಗಂಟೆಗೆ ಮೈಸೂರು ತಲುಪಲಿದೆ.
ಸೆಪ್ಟೆಂಬರ್ 26 ರಿಂದ ಟ್ರೈನ್ ನಂಬರ್ 17301, ಮೈಸೂರು-ಬೆಳಗಾಂ ಎಕ್ಸ್‌ಪ್ರೆಸ್ ಆಗಿ ಮೈಸೂರಿನಿಂದ ಹೊರಟು ಬೆಳಗಾವಿಯವರೆಗೂ ಓಡಲಿದೆ. ಇನ್ನು ಅದೇ ದಿನ ಟ್ರೈನ್ ನಂಬರ್ 17302, ಧಾರವಾಡದಿಂದ ಹೊರಡುವ ಬದಲು, ಬೆಳಗಾವಿಯಿಂದ ಹೊರಡಲಿದೆ. ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ಆಗಲಿದೆ.
17301 ರೈಲಿನ ಪ್ರಾಥಮಿಕ ನಿರ್ವಹಣೆ ಕೂಡಾ ಬೆಳಗಾವಿಯಲ್ಲೇ ಆಗಲಿದೆ. ನಿಲ್ದಾಣಗಳು ಹಾಗೂ ಸೆಪ್ಟೆಂಬರ್ 30 ರವರೆಗಿನ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.
TV24 News Desk
the authorTV24 News Desk

Leave a Reply