Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಕಲಬುರ್ಗಿ

ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ 13 ಜನರ ಬಂಧನ..!  

ಕಲಬುರಗಿ: ಕೆಇಎ ಪರೀಕ್ಷೆಯ ಮೊದಲ ದಿನವೇ ಬ್ಲೂಟೂತ್ ಬಳಸಿ ನಕಲು ಮಾಡಲು ಯತ್ನಿಸುತ್ತಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿಯಲ್ಲಿ ಇಬ್ಬರು ಅಭ್ಯರ್ಥಿಗಳು ಸೇರಿ 6 ಮಂದಿ, ಕಲಬುರಗಿಯಲ್ಲಿ ಐವರು ಅಭ್ಯರ್ಥಿಗಳು ಸೇರಿ 7 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲೂ ಸೊನ್ನಾ ಗ್ರಾಮದ ಅಭ್ಯರ್ಥಿ ತ್ರಿಮೂರ್ತಿ ಕಿವಿಯಲ್ಲಿದ್ದ ಸಣ್ಣ ಬ್ಲೂಟೂತ್ ತೆಗೆಸಲು ಪೊಲೀಸರು, ENT ವೈದ್ಯರ ಮೊರೆ ಹೋಗಬೇಕಾಯ್ತು.
ತ್ರಿಮೂರ್ತಿ ಸಹೋದರನಿಗೆ PSI ಹಗರಣದ ಕಿಂಗ್‌ಪಿನ್ ಆರ್.ಡಿ ಪಾಟೀಲ್ ಗ್ಯಾಂಗ್ ಕೀ ಆನ್ಸರ್ ಒದಗಿಸಿತ್ತು. ಹೀಗಾಗಿ ಆರ್.ಡಿ ಪಾಟೀಲ್ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಇನ್ನು, ಬಂಧಿತರಲ್ಲಿ ಬಹುತೇಕರು ಅಫಲಪುರದ ಸೊನ್ನ ಗ್ರಾಮದವರಾಗಿದ್ದಾರೆ. ಈ ಸಂಬಂಧ ಕಲಬುರಗಿಯಲ್ಲಿ ನಗರ ಪೋಲಿಸ್ ಆಯುಕ್ತ ಆರ್.ಚೇತನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ (Kalaburgi Examination Center) ಅಕ್ರಮ ನಡೆದಿದ್ದು, ಅಭ್ಯರ್ಥಿ ತ್ರಿಮೂರ್ತಿ ಹಾಗೂ ಅಭ್ಯರ್ಥಿ ಸಹೋದರ ಅಂಬರೀಷ್ ಮತ್ತು ಆರ್.ಡಿ.ಪಾಟೀಲ್ ವಿರುದ್ಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿ ತ್ರಿಮೂರ್ತಿ ತನ್ನ ಎಡ ಕಿವಿಯಲ್ಲಿ ಬ್ಲೂಟೂತ್ ಇಟ್ಟುಕೊಂಡು ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದಾನೆ. ಪರೀಕ್ಷಾ ಕೇಂದ್ರದ ಹೊರಗಡೆ ಕಾರ್‌ನಲ್ಲಿ ಕುಳಿತುಕೊಂಡು ಆತನ ಸಹೋದರ ಅಂಬರೀಷ್, ಕೀ ಉತ್ತರ ಹೇಳುತ್ತಿದ್ದದ್ದು ಕಂಡುಬಂದಿದೆ. ಅಂಬರೀಷ್‌ಗೆ ಆರ್.ಡಿ ಪಾಟೀಲ್ ಹಾಗೂ ಆತನ ಸಂಗಡಿಗರಿಂದ ಕೀ ಉತ್ತರಗಳು ದೊರೆಯುತ್ತಿದ್ದವು ಎಂದು ಮಾಹಿತಿ ಬಂದಿದೆ.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾದ ಶಿಲ್ಪಾ ಚನ್ನವೀರ ಚಕ್ಕಿ ಅವರು ನೀಡಿ ದೂರಿನ ಅಡಿಯಲ್ಲಿ ಐಪಿಸಿ ಸೆಕ್ಷನ್ 420, 120ಬಿ, 109, 114, 36, 37, 34 ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ಸಂಪೂರ್ಣ ತನಿಖೆ ನಂತರವೇ ಸತ್ಯಾಂಶ ತಿಳಿಯಲಿದೆ ಎಂದು ತಿಳಿಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!