ಬೆಳಗಾವಿ

ಧಾರವಾಡದ ಮಹಿಳೆ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆ..! 

ಸವದತ್ತಿ:  ತಾಲೂಕಿನ ಗೊರವನಕೊಳ್ಳದ ಮಲಪ್ರಭಾ ಹಿನ್ನೀರಿನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಎರಡು ದಿನಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಸವದತ್ತಿ ತಾಲೂಕಿನ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ರವಿವಾರ ಶವ ಪತ್ತೆಯಾಗಿದೆ.ಧಾರವಾಡ ನಗರದ ಸಪ್ತಾರಬಾವಿ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ ಪಾಟೀಲ(40) ಮೃತ ಮಹಿಳೆ.ಪ್ರೀಯದರ್ಶಿನಿ ಪತಿ ಲಿಂಗರಾಜ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಆಗಸ್ಟ್‌ 18ರಂದು ಪ್ರಿಯದರ್ಶಿನಿ ರಾಜ್ಯಕ್ಕೆ ಮರಳಿದ್ದರು. ಪ್ರಿಯದರ್ಶಿನಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
TV24 News Desk
the authorTV24 News Desk

Leave a Reply