Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

ಗೃಹಲಕ್ಷ್ಮೀ ಸುಲಿಗೆ: ಗ್ರಾಮ ಒನ್ ಕೇಂದ್ರ ಸೀಜ್..! 

ಗ್ರಾಮ ಒನ್ ಸಿಬ್ಬಂದಿ ದುರಹಂಕಾರಕ್ಕೆ ತಕ್ಕ ಶಿಕ್ಷೆ ನೀಡಿದ ತಾಲೂಕಾಡಳಿತ 
ಅಥಣಿ :ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ನೋಂದಣಿಗೆಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಅಥಣಿ ತಾಲ್ಲೂಕಿನ ಅವರಖೋಡ ಗ್ರಾಮದ ಗ್ರಾಮ‌ ಒನ್ ಕೇಂದ್ರವನ್ನು ಅಧಿಕಾರಿಗಳುಸೀಜ್ ಮಾಡಿದ್ದಾರೆ. 
ಗೃಹ ಲಕ್ಷ್ಮೀ ಯೋಜನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರನ್ನ ಬೇಕಾದರೂ ಕರೆಸು ಫ್ರಿಯಾಗಿ ನಾವು ಮಾಡಲ್ಲಾ ಎಂದು ಗ್ರಾಮ ಒನ್ ಕೇಂದ್ರದ ಸಿಬ್ಬಂದಿಯಿಂದ ಧಮ್ಕಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವಖೋಡ ಗ್ರಾಮದಲ್ಲಿನಡೆದಿತ್ತು.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ತುಂಬಲು ಯಾವುದೇ ರೀತಿಯಾದ ಹಣ ಪಡೆಯಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ ಅಥಣಿ ತಾಲೂಕಿನ ‌ಅವಘೋಡ ಗ್ರಾಮದಲ್ಲಿ ಗೃಹಲಕ್ಷ್ಮಿ‌ ಅರ್ಜಿ ಹಾಕಲು ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ಹಾಲಪ್ಪ ಲೋಕೂರ ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು 100 ಪಡೆಯುತ್ತಿದ್ದಾನೆ ಎಂದು ಸಾರ್ವಜನಿಕರ ದೂರಿಗೆ ತ್ವರಿತ ಸ್ಪಂದಿಸಿದಅಧಿಕಾರಿಗಳು ಸಂಬಂಧಿಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
TV24 News Desk
the authorTV24 News Desk

Leave a Reply

error: Content is protected !!