ಕಿತ್ತೂರು : ರಾಜ್ಯದಲ್ಲಿ ಕಾಂಗ್ರೆಸ್ ಬಿರುಗಾಳಿ ಬಿಸಿದ್ದು, ಈ ಸಲ ಬುದ್ದಿವಂತ ಮತದಾರ ಘಟಾನುಘಟಿಗಳಿಗೆ ಗೆಟ್ ಪಾಸ್ ಕೊಟ್ಟಿದ್ದು, ಅದರಲ್ಲೂ ಕಿತ್ತೂರು ಕರ್ನಾಟಕದಲ್ಲಿ ತೀವ್ರ ಪೈಪೋಟಿ ನಡೆದಿದ್ದ ಕಿತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ತಿರ್ಪು ಈಗ ಹೊರಬಿದ್ದಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹೈವೋಟೆಜ್ ಜಿದ್ದಜಿದ್ದಿನ ಕಣವಾಗಿದ್ದ ಕ್ಷೇತ್ರ ಕಿತ್ತೂರು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿದ್ದರು.ಒಂದು ಕಡೆ ನೋಡುವುದಾದರೆ, ಕಾಂಗ್ರೆಸ್ ನ ಗ್ಯಾರಂಟಿ ಹವಾ ಹಾಗೂ ಕರೋನಾ ಕಾಲದಲ್ಲಿ ಅವರು ಮಾಡಿದ ಕೆಲಸ ಸಾಮಾಜಿಕ ಸೇವೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಬಾಬಾ ಸಾಹೇಬ್ ಪಾಟೀಲ್ ಜಯಶಾಲಿಯಾಗಿದ್ದಾರೆ







