ಬೆಳಗಾವಿ: ಕ್ರೈಮ್ ಲೋಕದ ಕಳ್ಳರಿಗೆ ಖದೀಮರಿಗೆ ಸಿಂಹಸ್ವಪ್ನವಾಗಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ಕುಟುಂಬದ ಸದಸ್ಯೆಯಾಗಿ ಕಾರ್ಯಮಾಡುತ್ತಿದ್ದ ಜಾಣ ಶ್ವಾನ ಪೂಜಾ ವಿಧಿವಶವಾಗಿದೆ.
ಬೆಳಗಾವಿ ಕೆ-9 ಘಟಕದ ಸದಸ್ಯೆ ಪೂಕಾ ನಿಧಾನವಾಗಿದ್ದು, ಅಪರಾಧ ಪತ್ತೆಯಲ್ಲಿ ತರಬೇತಿ ಪಡೆದಿರುವ ಶ್ವಾನ ಪೂಜಾ ಸುಮಾರು
178 ಪ್ರಕರಣಗಳಲ್ಲಿ ಭಾಗವಹಿಸಿತ್ತು.
ಇದರ ಜೊತೆಗೆ ಅಸಾಮಾನ್ಯ ಪ್ರತಿಭೆಯನ್ನು ಹೊಂದಿದ್ದ ಪೂಜಾ ಎರಡು ಬಾರಿ ರೆಂಜ್ ಲೇವಲ್ ಮೀಟ್ ನಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ತನ್ನ ಜೀವಿತಾವಧಿಯಲ್ಲಿ ಅದು ಕಾನೂನಿಗೆ ಸಾಥ್ ನೀಡಿ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯ.
ಇದೀಗ ಪೂಜಾಳ ನಿಧನಕ್ಕೆ ಇಡಿ ಬೆಳಗಾವಿ ಪೊಲೀಸ್ ಸೇರಿದಂತೆ ಪೊಲೀಸ್ ವರಿಷ್ಠಧಿಕಾರಿಯಾದ ಡಾ ಸಂಜೀವ್ ಪಾಟೀಲ ಕಂಬನಿ ಮಿಡಿದಿದ್ದಾರೆ.










