Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಜಿಲ್ಲಾಡಳಿತದಿಂದ ಅದ್ದೂರಿ 284ನೇ ಸಂತ ಸೇವಲಾಲ್ ಜಯಂತಿ

ಬೆಳಗಾವಿ: ಜಿಲ್ಲಾಡಳಿದಿಂದ  ಬೆಳಗಾವಿಯಲ್ಲಿ ನಡೆದ ಸಂತ ಸೇವಾಲಾಲ್ 284ನೇ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.ಹಸಿದವರಿಗೆ ಅನ್ನದಾನ ಮಾಡಿದ ಸಿದ್ದಪುರುಷ ಶಕ್ತಿ ದೇವಿ ಆರಾಧಕ ಬಂಜಾರ ಸಮಾಜದ ಕುಲದೈವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಶಾಸಕ ಅನಿಲ ಬೆನಕೆ ಅದ್ದೂರಿಯಾಗಿ ಚಾಲನೆ ನೀಡಿದರು.
ಬೆಳಗಾವಿ ಕೋಟೆ ಕೆರೆ ಅಶೋಕ್ ವೃತ ದಿಂದ ಪ್ರಾರಂಭ  ವಾಗಿ ನೃತ್ಯ ಮುಖಾಂತರ ಎಲ್ಲರೂ ಅತಿ  ವಿಭ್ರಂಭಣೆಯಿಂದ ಸಂತ ಸೇವಾಲಾಲ್ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ವೇಳೆ ಸಂಸದೆ ಮಂಗಳಾ ಅಂಗಡಿ ಮತ್ತು ಜಿಲ್ಲಾಡಳಿತ, ಜಿಲ್ಲಾಪಂಚಾಯಥ ಅಧಿಕಾರಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಅನೇಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರು ಹಾಗೂ ಕೆ ಎಸ್ ಆರ್ ಟಿ ಸಿ ನೌಕರರು ಸಿಬ್ಬಂದಿ ವರ್ಗದವರು ಎಲ್ಲರೂ ಉಪಸ್ಥಿತರಿದ್ದರು.
TV24 News Desk
the authorTV24 News Desk

Leave a Reply

error: Content is protected !!