Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿಬೆಳಗಾವಿ ನಗರ

ಗಡಿವಿವಾದ ಶೀಘ್ರದಲ್ಲಿ ಬೆಳಗಾವಿಗೆ ಬರಲಿದ್ದೇನೆ  ಮಹಾ ಸಚಿವ ದೇಸಾಯಿ

ಬೆಳಗಾವಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಅವರು ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ನಿಮಿತ್ತ ಶಿನೋಳಿಗೆ ಸಚಿವರು ಆಗಮಿಸಿದ್ದರು. ಅಲ್ಲದೆ, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು. ಬೆಳಗಾವಿ ನಮ್ಮ ಹಕ್ಕು, ಕರ್ನಾಟಕದಲ್ಲಿ ಇರಲ್ಲ ಎಂದು ಘೋಷಣೆ ಕೂಗಿದ್ದಾರೆ ಎಂದು ತಿಳಿದುಬಂದಿದೆ.
10 ಕ್ಕೂ ಅಧಿಕ ಎಂಇಎಸ್ ‌ಮುಖಂಡರು ಬೆಳಗಾವಿಯಿಂದ ಶಿನೋಳಿಗೆ ತೆರಳಿದ್ದರು. ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡುತ್ತಿದೆ. ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ಪತ್ರ ನೀಡುತ್ತಿಲ್ಲ ಎಂದು ಸಚಿವ ಶಂಭುರಾಜ ದೇಸಾಯಿ ಬಳಿ ಕೆಲ ಮರಾಠಿಗರು ಸುಳ್ಳು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಎಂಇಎಸ್ ಕಿಡಿಗೇಡಿಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಶಂಭುರಾಜ ದೇಸಾಯಿ, ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಪರವಾಗಿದೆ. ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಿ ಇಬ್ಬರನ್ನು ಸಚಿವರನ್ನಾಗಿ ನೇಮಿಸಿದೆ. ಅದರಲ್ಲಿ ನಾನು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವನಾಗಿ ನೇಮಕ ಆಗಿದ್ದೇನೆ. ತಕ್ಷಣವೇ ನಾವು ಬೆಳಗಾವಿಗೆ ಬರಲು ನಿರ್ಧಾರ ಮಾಡಿದ್ದೆವು. ಡಿಸೆಂಬರ್ 3ಕ್ಕೆ ಬರಬೇಕಿತ್ತು.. ಆದರೆ 6 ರಂದು ಬರುವುದು ನಿಗದಿ ಆಯ್ತು. 850 ಹಳ್ಳಿಗಳಿಗೆ ಏನು ಸೌಲಭ್ಯ ಕೊಡಬೇಕು.. ಏನು ಅನ್ಯಾಯ ಆಗಿದೆ ಅನ್ನೋದನ್ನು ತಿಳಿಯಬೇಕಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದು ಒಳ್ಳೆಯದಾಗಿದೆ ಎಂದರು.
ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನಗಳು ಪೂರ್ಣಗೊಂಡ ನಂತರ ಬೆಳಗಾವಿಗೆ ಭೇಟಿ ನೀಡುತ್ತೇವೆಂದು ಮಹಾರಾಷ್ಟ್ರ ಸಚಿವರು ಹೇಳಿದ್ದಾರೆ. ಬೆಳಗಾವಿ: ಕರ್ನಾಟಕದ ಬೆಳಗಾವಿಯಲ್ಲಿ ಮತ್ತು ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನಗಳು ಪೂರ್ಣಗೊಂಡ ನಂತರ ಬೆಳಗಾವಿಗೆ ಭೇಟಿ ನೀಡುತ್ತೇವೆಂದು ಮಹಾರಾಷ್ಟ್ರ ಸಚಿವರು ಹೇಳಿದ್ದಾರೆ.
ಕೊಲ್ಲಾಪುರ(ಮಹಾರಾಷ್ಟ್ರ): ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಮತ್ತೆ ಉದ್ಧಟತನ ಮೆರೆದಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿರುವ ಘಟನೆ ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕೊಲ್ಲಾಪುರ ಜಿಲ್ಲೆಯ ಶಿನೋಳಿ ಗ್ರಾಮದಲ್ಲಿ ನಡೆದಿದೆ.
TV24 News Desk
the authorTV24 News Desk

Leave a Reply

error: Content is protected !!