ಸಂಕೇಶ್ವರ: ದೀಪಕ ಭೂಪಾಲ ಬಾಳಕಾಯಿ ಹೆಬ್ಬಾಳ ಇವರು ಸಂಕೇಶ್ವರ ಪೊಲೀಸ ಠಾಣೆಗೆ ಮನೆ ಕಳ್ಳತನದ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಎಸ್.ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿ ಪಿ.ಐ ಪಿ ಆರ್ ಚನ್ನಗಿರಿ ನೇತೃತ್ವದಲ್ಲಿ ಪಿ.ಎಸ್.ಐ, ಎಸ್. ಬಿ. ನಾಯಿಕವಾಡಿ ಮತ್ತು ಸಿಬ್ಬಂದಿಯವರಾದ ಕೆ ನಾಗನೂರಿ, ಐ ಬಿ ಅಲಗರಾವತ, ಬಿ ವಿ ಹುಲಕುಂದ, ಮೆಹಬೂಬ ದಾದಾಮಅಕ, ಚ ಟ ಪಾಟೀಲ, ಎಮ್ ಎಮ್ ಜಂಬಗಿ, ಚಿ. ಎಸ್. ಕಪರಟ್ಟಿ, ಮಹೇಶ ಕರಗುಪ್ಪಿ, ಯಾಶೀನ ನದಾಫ್ ಇವರನ್ನೊಳಗೊಂಡ ತಂಡ ಆರೋಪಿಯನ್ನು ಪತ್ತೆ ಮಾಡಿ ಆರೋಪಿಯಿಂದ ಸುಮಾರು 85 ಗ್ರಾಂ ಬಂಗಾರದ ಆಭರಣ ಹಾಗೂ ರೋಖ ಹಣ 4500/- ಮತ್ತು ಒಂದು ಟಲ್ಲಿ ಹೀಗೆ ಒಟ್ಟು 5,03,000/- ಬೆಲೆ ಬಾಳುವ ವಸ್ತುಗಳನ್ನು ಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಚಿನ್ನಾಭರಣ ಸಮೇತ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದ ತಂಡಕ್ಕೆ ಪೊಲೀಸ ಜಿಲ್ಲಾ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅಭಿನಂದಿಸಿದ್ದಾರೆ.
tv24plus.in > Blog > ಜಿಲ್ಲೆ > ಬೆಳಗಾವಿ > ಸಂಕೇಶ್ವರ ಪೊಲೀಸರ ಭರ್ಜರಿ ಬೇಟೆ :5.03 ಲಕ್ಷದ ಚಿನ್ನಾಭರಣ ಪತ್ತೆ