ಬೆಳಗಾವಿ

ಮದುವೆಗೆ ಹೊರಟಿದ್ದ ಬಸ್ ಪಲ್ಟಿ ಹಲವರಿಗೆ ಗಾಯ

ಖಾನಾಪೂರ: ಓಲಮನಿ ಗ್ರಾಮದ ಬಳಿ ಖಾಸಗಿ ಬನ್ನೊಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ. ಬಸ್ಸು ಗೋವಾ ರಾಜ್ಯದ ಮಡಗಾಂವ್ ನಿಂದ ಬೈಲೂರು ಗ್ರಾಮಕ್ಕೆ ಸಾಗುತ್ತಿತ್ತು. ಬಸ್ ನಲ್ಲಿದ್ದವರು ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಬೆಳಗಿನ ಜಾವ 4.30ರ ಸುಮಾರಿಗೆ ಚಾಲಕನ ಹತೋಟಿ ತಪ್ಪಿದ ಬಸ್ ಜಿಎ 07ಎಫ್ 8833 ಖಾಸಗಿ ಮಿನಿ ಬಸ್ ಓಲಮನಿ ಗ್ರಾಮದ ಹತ್ತಿರ ಬೆಳಗಿನ ಜಾವ 4.30 ಕ್ಕೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಗೊಂಡ ಘಟನೆ ನಡೆದಿದೆ ಒಟ್ಟು 35ಜನರು ಈ ಮಿನಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು ಅದರಲ್ಲಿ 9 ಜನರಿಗೆ ಸಣ್ಣ ಗಾಯಗಳಾಗಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
TV24 News Desk
the authorTV24 News Desk

Leave a Reply