Uncategorized

ಮದುವೆ ಆಗ್ತಿನಿ ಎಂದು ಮೋಸ ಮಾಡಿದ ಯುವಕನ ಮನೆಗೆ ಬಂದು ಧರಣಿ ನಡೆಸಿದ ಪ್ರೇಯಸಿ!

ಚಿಕ್ಕೋಡಿ:

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಕೈಕೊಟ್ಟ ಯುವಕನ ಮನೆಗೆ ತೆರಳಿ ಯುವತಿ ಧರಣಿ ನಡೆಸಿದ ಘಟನೆ ಕಾಗವಾಡದಲ್ಲಿ ನಡೆದಿದೆ.ಕಳೆದ ಆರು ತಿಂಗಳಿನಿಂದ ಒಟ್ಟಿಗೆ ಇದ್ದು ಈಗ ಮದುವೆಯಾಗುವುದಿಲ್ಲ ಎಂದು ಯುವಕ ಮೋಸ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಪ್ಪಾರವಾಡಿ ಗ್ರಾಮದ ಅಕ್ಷಯ ಉಪ್ಪಾರ ಎಂಬ ಯುವಕನಿಂದದ ಮೋಸದ ಆರೋಪ ಕೇಳಿ ಬಂದಿದೆ.
ಕಾಗವಾಡ ಪಟ್ಟಣದ ರೂಪಾ(ಹೆಸರು ಬದಲಾಯಿಸಲಾಗಿದೆ) ಎಂಬುವವಳನ್ನು ಪುಸಲಾಯಿಸಿ ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.
ಸುಮಾರು ಆರು ತಿಂಗಳಿಂದ ಬೆಳಗಾವಿಯಲ್ಲಿ ಕಾಲ ಕಳೆದು ಈಗ ಮದುವೆ ಆಗುವುದಿಲ್ಲ ಎನ್ನುತ್ತಿರುವ ಸುಕುಮಾರನ
ಉಪ್ಪಾರವಾಡಿಯಲ್ಲಿರುವ ಆತನ ಮನೆಗೆ ಬಂದ ಪ್ರೇಯಸಿ ರೂಪಾ ತನಗೆ ಅನ್ಯಾಯವಾಗಿದೆ ಎಂದು ಅಳಲು ತೊಡಿಕೊಂಡಿದ್ದಾಳೆ.ನನ್ನನ್ನು ಎಲ್ಲಾ ರೀತಿಯಿಂದ ಬಳಕೆಮಾಡಿಕೊಂಡು ಈಗ ಮದುವೆ ಆಗುವದಿಲ್ಲ ಎಂದು ಸುಕುಮಾರ ಹೇಳುತ್ತಿದ್ದಾನೆ ಎಂದು ರೂಪಾ ಆರೋಪಿಸಿದ್ದಾಳೆ.ಅಲ್ಲದೇ ಆತ ತನ್ನನ್ನು ಮದುವೆ ಆಗುವವರೆಗೂ ಅವರ ಮನೆಯಿಂದ ಹೊರ ಹೋಗುವದಿಲ್ಲ ಎಂದು ರೂಪಾ ಪಟ್ಟು ಹಿಡಿದಿದ್ದಾಳೆ.ಈ ಕುರಿತು ಸುಕುಮಾರ ಉಪ್ಪಾರ ಮನೆಯಲ್ಲಿ ಹೈಡ್ರಾಮಾ ನಡೆದಿದೆ.ಕಳೆದ ಹಲವಾರು ವರ್ಷಗಳಿಂದ ಸುಕುಮಾರ ಹಾಗೂ ರೂಪಾ ನಡುವೆ ಪ್ರೀತಿ ಹುಟ್ಟಿದ್ದು ಇಬ್ಬರೂ ಸಹ ಒಬ್ಬರೊಬ್ಬರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಸಾಕ್ಷಿ ನಾಶಪಡಿಸಲು ಹುಡುಗಿಯ ಕೈಯಲ್ಲಿದ್ದ ಮೊಬೈಲನ್ನು ಕಿತ್ತುಕೊಂಡು ಸುಕುಮಾರ್ ಒಡೆದು ಹಾಕಿದ್ದಾನೆ ಎಂದು ರೂಪಾ ಆರೋಪಿಸಿದ್ದಾಳೆ.ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ಘಟನೆಯಿಂದ ಸುಕುಮಾರ್ ಮನೆಯವರೂ ಸಹ ಮುಗುಗರಕ್ಕೊಳಗಾದಬೇಕಾದ ಸ್ಥಿತಿ ನಿರ್ಮಾಣವಾಗಿದೆ.

TV24 News Desk
the authorTV24 News Desk

Leave a Reply

error: Content is protected !!