Uncategorized

ಕಬ್ಬಿನ ಗದ್ದೆಯಿಂದ ಓಡಿ ಹೊರ ಬಂದ ಚಿರತೆ! ಮಾಟೋಳ್ಳಿ ಜನರಲ್ಲಿ ಆತಂಕ!

ಬೆಳಗಾವಿ:

ಬೆಳಗಾವಿಯಲ್ಲಿ ಚಿರತೆ ಪ್ರತ್ಯಕ್ಷಗೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಚಿರತೆಯನ್ನು ಕಂಡು ಸದ್ಯ ಸಾರ್ವಜನಿಕರು ಹೌಹಾರಿದ್ದಾರೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಾಟೊಳ್ಳಿ ಕ್ರಾಸ್ ಬಳಿ ಚಿರತೆ ಪ್ರತ್ಯಕ್ಷಗೊಂಡಿದ್ದು
ಚಿರತೆ ಕಾಣಿಸಿಕೊಂಡ ಹಿನ್ನೆಲೆ ಭಯದಲ್ಲಿ ಜನ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮಸ್ಥರು ಹಾಕಿರೋ ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆ ಚಲನವಲನ ಸೆರೆಯಾಗಿದ್ದು
ಚಿರತೆ ಗ್ರಾಮದ ಜಾಕವೇಲ್ ಕಡೆಗೆ ಹೋಗಿರೋದ್ರಿಂದ ತೀವ್ರ ಆತಂಕಕ್ಕೆ ಗ್ರಾಮದ ಜನ ಒಳಗಾಗಿದ್ದಾರೆ. ಇನ್ನು ಹೊಲ ಗದ್ದೆಗಳಿಗೆ ಹೊರಡುವ ರೈತರು ಸಹ ಆತಂಕದಲ್ಲಿದ್ದಾರೆ.ಆದಷ್ಟು ಚಿರತೆ ಸೆರೆ ಹಿಡಿಯುವಂತೆ ರೈತರ ಅರಣ್ಯ ಇಲಾಖೆಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.ಸದ್ಯ ಪ್ರಕರಣವು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!