ಬೆಳಗಾವಿ:
ಲಕ್ಷ್ಮಣ ಸವದಿ ಬಳಿಕ ಮತ್ತೋರ್ವ ಆಪ್ತನಿಗೆ ಸಿಎಂ ಡಿಕೆ ಶಿವಕುಮಾರ್ ಸ್ಥಾನಮಾನ ನೀಡಿದ್ದಾರೆ.ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಆಪ್ತನಿಗೆ ಪ್ರಾಧಿಕಾರದ ಅಧ್ಯಕ್ಷ ಪಟ್ಟವನ್ನು ಸಿಎಂ ಡಿಕೆ ಶಿವಕುನಾರ್ ಕರುಣಿಸಿದ್ದುಆ ಮೂಲಕ ಬೆಳಗಾವಿ ಶಾಸಕನ ಸಮಾಧಾನಪಡಿಸುವಲ್ಲಿ ಸಿಎಂ ಡಿಕೆಶಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ಗೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆ ಒಲಿದು ಬಂದಿದೆ.ಅಲ್ಪಸಂಖ್ಯಾತ ಕೋಟಾದಡಿ ಮಂತ್ರಿ ಸ್ಥಾನ ನೀಡುವಂತೆ ಶಾಸಕ ಆಸೀಫ್ ಸೇಠ್ ಪಟ್ಟು ಹಿಡಿದಿದ್ದರು.ಅದಕ್ಕಾಗಿ ನಾಲ್ಕೈದು ಸಲ ದೆಹಲಿಗೂ ಹೋಗಿ ಲಾಬಿ ಆಸೀಫ್ ಸೇಠ್ ಲಾಭಿ ನಡೆಸಿದ್ದರು.ಸೇಠ್ ಬೆಂಬಲಕ್ಕೆ ನಿಂತಿದ್ದ ಕಿತ್ತೂರು ಕರ್ನಾಟಕ ಭಾಗದ ಮುಸ್ಲಿಂ ಧರ್ಮಗುರುಗಳು ಸಹ ನಿಂತಿದ್ದರು. ಶಾಸಕ ಸೇಠ್ ಗೆ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಸಭೆ ನಡೆಸಿ ಸೇಠ್ಗೆ ಮಂತ್ರಿ ಸ್ಥಾನ ಕೊಡುವಂತೆಯೂ ಸಹ ಮುಸ್ಲಿಂ ಸಮಾಜ ಆಗ್ರಹಿಸಿತ್ತು.
ಆದರೆ ಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಸೇಠ್ಗೆ ಡಿಕೆಶಿ ಸಂಪುಟದಲ್ಲಿ ಚಾನ್ಸ್ ಸಿಕ್ಕಿಲ್ಲ.
ಹೀಗಾಗಿ ಬುಡಾ ಅಧ್ಯಕ್ಷ ಸ್ಥಾನಮಾನ ಕೊಟ್ಟು ಆಪ್ತನ ಮನವನ್ನು ಡಿಕೆ ಶಿವಕುಮಾರ್ ತನಿಸಿದ್ದಾರೆ ಎನ್ನಲಾಗಿದೆ.ಈ ಮೊದಲು ಬುಡಾ ಅಧ್ಯಕ್ಷರಾಗಿದ್ದ ಲಕ್ಷ್ಮಣರಾವ್ ಚಿಂಗಳೆಗೆ ಕೋಕ್ ನೀಡಿದ್ದು
ಎಂಪಿ ಚುನಾವಣೆಯಲ್ಲಿ ಚಿಕ್ಕೋಡಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಚಿಂಗಳೆಗೆ ಕಾಂಗ್ರೇಸ್ ಟಿಕೇಟ್ ಕೈ ತಪ್ಪಿ ಸಚಿವ ಸತೀಶ್ ಮಗಳು
ಪ್ರಿಯಾಂಕಾ ಜಾರಕಿಹೊಳಿಗೆ ಟಿಕೇಟ್ ನೀಡಲಾಗಿತ್ತು. ಕಾಂಗ್ರೆಸ್ ಟಿಕೆಟ್ ಸಿಕ್ಕಿದಕ್ಕೆ ಚಿಂಗಳೆಗೆ ಬುಡಾ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ತಣಿಸುವ ಕೆಲಸವನ್ನು ಪಕ್ಷ ಮಾಡಿತ್ತು. ಈಗ ಅದೇ ರೀತಿಯಲ್ಲಿ ಸಚಿವ ಸ್ಥಾನ ಸಿಗದ ಸೇಠ್ ಗೆ ಬೂಡಾ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡುವ ಕೆಲಸಕ್ಕೆ ಪಕ್ಷ ಮುಂದಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಬೂಡಾ ಅಧ್ಯಕ್ಷರಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅಸೀಫ್ ಸೇಠ್ ಅಧಿಕಾರ ಸ್ವೀಕರಿಸಲಿದ್ದಾರೆ.














