Uncategorized

ಡೊಮೆಸ್ಟಿಕ್ ಗ್ಯಾಸ್ ಬಳಸುತ್ತಿದ್ದ ಹೊಟೇಲ್ ಮಾಲೀಕರಿಗೆ ಚಿಕ್ಕೋಡಿ ತಹಶೀಲ್ದಾರ್ ಶಾಕ್!

ಬೆಳಗಾವಿ:

ಹೊಟೇಲುಗಳಲ್ಲಿ ಕಮರ್ಷಿಯಲ್ ಗ್ಯಾಸ್ ಬಳಕೆ ಮಾಡಬೇಕು ಅನ್ನೋ ನಿಯಮವನ್ನು ಗಾಳಿಗೆ ತೂರಿ ಹೊಟೇಲ್ ಮಾಲೀಕರು ಡೊಮೆಸ್ಟಿಕ್ ಗ್ಯಾಸ್ ಬಳಕೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇಂದು ಚಿಕ್ಕೋಡಿ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂತಹ ಹೊಟೇಲ್ ಮಾಲೀಕರಿಗೆ ಶಾಕ್ ನೀಡಿದ್ದಾರೆ.ಬೆಳ್ಳಂ ಬೆಳಗ್ಗೆ ಹೋಟೇಲುಗಳಲ್ಲಿ ಅಡುಗೆ ಮಾಡುತ್ತಿದ್ದ ಅಡುಗೆ ಭಟ್ಟರಿಗೂ ಇದರ ಬಿಸಿ ತಟ್ಟಿದೆ.ಡೊಮೆಸ್ಟಿಕ್ ಗ್ಯಾಸ್ ಬಳಕೆ ಮಾಡ್ತಿದ್ದ ಹೊಟೇಲ್ ಮಾಲೀಕರಿಗೆ ಶಾಕ್ ನೀಡಲಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಹಶೀಲ್ದಾರ್ ರಾಜೇಶ್ ಬುರ್ಲಿ ಯವರು ಬೆಳ್ಳಂ ಬೆಳಗ್ಗೆ ಈ ರೆಡ್ ಮಾಡಿದ್ದಾರೆ‌.ವಿವಿಧ ಹೊಟೇಲ್ ಗಳ ಮೇಲೆ ದಾಳಿ ಮಾಡಿ ಒಟ್ಟು 29 ಡೊಮೆಸ್ಟಿಕ್ ಗ್ಯಾಸ್ ಗಳನ್ನು ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೇ ವೇಳೆ ತಹಶಿಲ್ದಾರ್ ರಾಜೇಶ್ ಬುರ್ಲಿ ಹೊಟೇಲ್ ಮಾಲೀಕರಿಗೆ ನೋಟಿಸ್ ನೀಡಿದ್ದು ಡೊಮೆಸ್ಟಿಕ್ ಗ್ಯಾಸ್ ಬಳಸದಂತೆ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!