Uncategorized

ನೂತನ ಸಹಕಾರ ಸಚಿವ ಸವದಿ ಅಭಿನಂಧಿಸಿದ ನಿಖಿಲ್ ಕತ್ತಿ ಹಾಗೂ ರಮೇಶ್ ಕತ್ತಿ!

ಬೆಳಗಾವಿ:

ಸಹಕಾರ ಸಚಿವ ಲಕ್ಷ್ಮಣ ಸವದಿ, ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ದಿಢೀರ್ ಭೇಟಿಯಾಗಿದ್ದಾರೆ. ಸಹಕಾರ ಸಚಿವರಾದ ಬಳಿಕ ಸವದಿಯವರನ್ನು ರಮೇಶ್ ಕತ್ತಿ‌ ಹಾಗೂ ಹುಕ್ಕೇರಿ ಶಾಸಕ ನಿಖೀಲ್ ಕತ್ತಿ ಭೇಟಿ ಮಾಡಿ ಶುಭ ಹಾರೈಸಿದ್ದಾರೆ.ಸದ್ಯ ಮೂವರ ಭೇಟಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಮಾಜಿ ಸಂಸದ ರಮೇಶ್ ಕತ್ತಿಗೆ ಹುಕ್ಕೇರಿ ಬಿಜೆಪಿ ಶಾಸಕ ನಿಖಿಲ್ ಕತ್ತಿ ಸಾಥ್ ನೀಡಿದ್ದು ಲಕ್ಷ್ಮಣ ಸವದಿ ನೂತನ ಸಹಕಾರ ಸಚಿವರಾಗ್ತಿದ್ದಂತೆ ರಮೇಶ್ ಕತ್ತಿ ತೆರಳಿ ಅವರನ್ನು ಅಭಿನಂದಿಸಿದ್ದಾರೆ.ಬೆಂಗಳೂರಿನ ಲಕ್ಷ್ಮಣ ಸವದಿ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿದ್ದು ಭೇಟಿಯ ಫೋಟೊವನ್ನು ಫೇಸ್ಬುಕ್‌ನಲ್ಲಿ ಹಂಚಿಕೊಂಡ ಸಚಿವ ಸವದಿ, ಹಾಗೂ ರಮೇಶ್ ಕತ್ತಿ ಹಂಚಿಕೊಂಡಿದ್ದಾರೆ.
ಮೊದಲಿನಿಂದಲೂ ಲಕ್ಷ್ಮಣ ಸವದಿ- ಜಾರಕಿಹೊಳಿ‌ ಫ್ಯಾಮಿಲಿ ಮಧ್ಯೆ ಸಂಬಂಧಗಳು ಸರಿಯಿಲ್ಲ ಎಂಬ ಮಾತುಗಳಿವೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸಹಕಾರ ಕ್ಷೇತ್ರ ಹಾಗೂ ರಾಜಕೀಯವಾಗಿ ಉಭಯ ಕುಟುಂಬಗಳ ಮಧ್ಯೆ ಸಂಘರ್ಷ ನಡೆಯುತ್ತಲೇ ಇರುತ್ತವೆ.ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಸವದಿ ವಿರುದ್ಧ ಅಭ್ಯರ್ಥಿಯನ್ನು ಜಾನಕೊಳಿ ಸಹೋರರು ಅಭ್ಯರ್ಥಿಯನ್ನು ಜಾರಕಿಹೊಳಿ‌ ಬ್ರದರ್ಸ್ ಕಣಕ್ಕಿಳಿಸಿದ್ದರು.
ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ವಿರುದ್ಧ ಮಹೇಶ ಕುಮಟಳ್ಳಿ ಸ್ಪರ್ಧೆ ಮಾಡಿದ್ದರು.
ಮತ್ತೊಂದೆಡೆ ಕಳೆದೊಂದು ವರ್ಷದಿಂದ ಜಾರಕಿಹೊಳಿ‌ ಹಾಗೂ ಕತ್ತಿ ಫ್ಯಾಮಿಲಿ ಮಧ್ಯೆಯೂ ಒಡಕು ಶುರುವಾಗಿದ್ದು ಈ ಬೆಳವಣಿಗೆ ಮಧ್ಯೆ ಸವದಿ ಹಾಗೂ ಕತ್ತಿ ಭೇಟಿ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

TV24 News Desk
the authorTV24 News Desk

Leave a Reply

error: Content is protected !!