Uncategorized

ಇಡಿ ದಾಳಿಯ ಬೆನ್ನಲ್ಲೆ ಸಿಎ ಮನೆಗೆ ಕರೆಸಿಕೊಂಡು ಚರ್ಚೆ ನಡೆಸಿದ ವೈ ಮಂಜುನಾಥ್!

ಬೆಳಗಾವಿಯ ಟಿವಿ ಸೆಂಟರ್ ನಲ್ಲಿರೋ ಮಂಜುನಾಥ್ ನಿವಾಸಕ್ಕೆ ಆಗಮಿಸಿದ ಸಿ ಎ ಗಾಳಿ

ಬೆಳಗಾವಿ:

ಸತೀಶ್ ಜಾರಕಿಹೊಳಿ ಭಾಮೈದ ಅಬಕಾರಿ ಇಕಾಖೆಯ ಹೆಚ್ಚುವರಿ ಅಯುಕ್ತ ವೈ ಮಂಜುನಾಥ್ ಮೇಲೆ ಇಡಿ ದಾಳಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ನಿನ್ನೆ ಮುಂಜಾನೆ ಅವರಿಗೆ ಸಂಬಂಧಿಸಿದ 10 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಸಂಪತ್ತು ಹಾಗೂ ಬೇನಾಮಿ ಬಾರ್ ಲೈಸನ್ಸಗಳನ್ನು ಜಪ್ತಿ ಮಾಡಿದ್ದಾರೆ. ಇದರ ಬೆನ್ನಲ್ಲೆ ವೈ ಮಂಜುನಾಥ್ ಅಲರ್ಟ್ ಆಗಿದ್ದು ಬೆಳಗಾವಿಯ ಪ್ರಸಿದ್ಧ ಲೆಕ್ಕ ಪರಿಶೋಧಕ (ಸಿಎ) ಪಿ ಜಿ ಗಾಳಿಯವರನ್ನು ಮನೆಗೆ ಕರೆಸಿಕೊಂಡು ವೈ ಮಂಜುನಾಥ ಕೆಲ ಕಾಲ ಚರ್ಚೆ ನಡೆದಿದ್ದಾರೆ. ಬೆಳಗಾವಿಯ ಟಿ ವಿ ಸೆಂಟರ್ ನಲ್ಲಿರುವ ಮಂಜುನಾಥ್ ನಿವಾಸಕ್ಕೆ ಪಿ ಜಿ ಗಾಳಿ ಭೇಟಿ ನೀಡಿ ಮಂಜುನಾಥ್ ಜೊತೆಗೆ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಸದ್ಯ ಮಂಜುನಾಥ್ ಮನೆಯಲ್ಲಿ ಬೇನಾಮಿ ಬಾರ್ ಲೈನನ್ಸ್ ಗಳು, ಹಾಗೂ ಅಪಾರ ಪ್ರಮಾಣದ ನಗದು, ಕೆಜಿಗಟ್ಟಲೇ ಆಭರಣಗಳು ಪತ್ತೆಯಾಗಿವೆ ಎನ್ನಲಾಗಿದೆ. ಸದ್ಯ ಅಕ್ರಮ ಸಂಪತ್ತನ್ನು ಇಡಿ ಕೊಂಡೊಯ್ದಿದ್ದು ಇಡಿ ಎನೇನು ಜಪ್ತು ಮಾಡಿದೆ ಎಂದು ತಿಳದು ಬರಬೇಕಿದೆ.

TV24 News Desk
the authorTV24 News Desk

Leave a Reply