



ಮಹಾರಾಷ್ಟ್ರ:
ಐಫೋನ್ ಮೊಬೈಲ್ ಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಗನನ್ನು ಕಾಪಾಡಲು ಹೋಗಿದ್ದ ತಂದೆ ತಾಯಿಯೂ ಸಹ ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಮೂಲಗಳ ಪ್ರಕಾರ ಮಹಾರಾಷ್ಟ್ರದ ಛತ್ರಪತಿ ಸಭಾಜಿನಗರ ಜಿಲ್ಲೆಯ ಕಾವಡಾ ಹಿಲ್ ನಲ್ಲಿ ಘಟನೆ ನಡೆದಿದ್ದು 20 ವರ್ಷದ ಕುನಾಲ್ ಚಾಂಗುಡೆ ಎಂಬ ಯುವಕನ ಆತನ ತಂದೆ ತಾಯಿಯ ಜೊತೆಗೆ ಮೊಬೈಲ್ ಕೊಡಿಸಿ ಎಂದು ವಾದಕ್ಕಿಳಿದಿದ್ದ ಅಲ್ಲದೇ ಐಫೋನ್ ಮೊಬೈಲ್ ಕೊಡಿಸದಿದ್ದರೆ ತಾನು ಅತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ..ಇದೆ ಕಾರಣಕ್ಕೆ ಮನೆಯಿಂದ ಆನತಿ ದೂರದಲ್ಲಿರುವ ಕಾವಡಾ ಹಿಲ್ ಗೆ ಕುನಾಲ್ ಹೋಗಿದ್ದ ಅಲ್ಲಿನ ಕಡಿದಾದ ಬೆಟ್ಟದ ತುದಿಯ ಮೇಲೆ ನಿಂತು ಪೋಷಕರಿಗೆ ಬೆದರಿಕೆ ಒಡ್ಡಿದ್ದ ಎನ್ನಾಲಾಗಿದೆ. ವಿಷಯ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಹಾಗೆಯೇ ಕುನಾಲ್ ಫೋಷಕರೂ ಸಹ ಸ್ಥಳಕ್ಕೆ ಭೇಟಿ ನೀಡಿ ಕುನಾಲ್ ಮನವೊಲಿಸಲು ಪ್ರಯತ್ನಿಸಿದರೂ ಕುನಾಲ್ ನಿಂತಿದ್ದ ತುದಿಯಿಂದ ಚೂರು ಅಲುಗಾಡಿರಲಿಲ್ಲ.ಕಡೆಗೆ ನಿನ್ನ ಆಸೆಯಂತೆಯೇ ಮೊಬೈಲ್ ಕೊಡಿಸುವೆ ಈಗ ಅಲ್ಲಿಂದ ಬಾ ಎಂದು ಹೇಳಿ ಕುನಾಲ್‌ನನ್ನು ತನ್ನತ್ತ ಎಳೆಯಲು ಕುನಾಲ್ ತಂದೆ ಪ್ರಯತ್ನಸಿದ್ದಾರೆ. ಈ ವೇಳೆ ಜಗ್ಗಾಟ ನಡೆದು ಮಗ ಕುನಾಲ್ ಹಾಗೂ ಆತನ ತಂದೆ ಆಯತಪ್ಪಿ 100 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಇನ್ನು ಇದನ್ನು ನೋಡುತ್ತ ಕುಳಿತಿದ್ದ ಕುನಾಲ್ ತಾಯಿಯೂ ಸಹ ತಂದೆ ಮಗ ಬೀಳುತ್ತಿದ್ದಂತೆ ಆಕೆಯೂ ಸಹ ಮೇಲಿನಿಂದ ಹಾರಿದ್ದಾಳೆ. ಸಧ್ಯ ಒಂದು ಐಫೋನ್ ಗಾಗಿ ಮೂರು ಜೀವಗಳು ಹಾರಿ ಹೋಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮೃತದೇಹಗಳನ್ನು ಕುಟುಂಬಂಸ್ಥರಿಗೆ ಹಸ್ತಾಂತರಿಸಿದ್ದಾರೆ.ದುರ್ಘಟನೆಯ ವಿಡಿಯೋ ಒಂದು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಕೇವಲ ಮೊಬೈಲ್ ಗಾಗಿ ಹಠಹಿಡಿದ ಮಗನ ಉಳಿಸಲು ಹೋಗಿ ದಾರುಣವಾಗಿ ತಂದೆತಾಯಿಯೂ ಸಹ ಸಾವನ್ನಪ್ಪಿದ್ದು ದುರ್ದೈವದ ಸಂಗತಿ. ಇದನ್ನೆಲ್ಲ ನೋಡುತ್ತಿದ್ದರೆ ನಮ್ಮ ಈಗಿನ ಯುವಪೀಳಿಗೆ ಎತ್ತ ಸಾಗುತ್ತಿದೆ ಎನ್ನುವ ಆತಂಕ ಈಗ ಎಲ್ಲರನ್ನು ಕಾಡುತ್ತಿದೆ. ಅಲ್ಲದೇ ಘಟನೆಯ ಶೋಕ ಕೇವಲ ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕದ ಗಡಿಯನ್ನೂ ಸಹ ಅವರಿಸಿಕೊಂಡಿದೆ.









