ಜಿಲ್ಲೆಬೆಳಗಾವಿ

ನಾಡದ್ರೋಹಿ ಎಂಇಎಸ್ ಪುಂಡರನ್ನು ಗಡಿಪಾರು ಮಾಡಿ ಕರವೇ ಆಗ್ರಹ!

ಬೆಳಗಾವಿ:

ಬೆಳಗಾವಿ ಪಾಲಿಕೆ ಪರಿಷತ್ ಸಭೆಯಲ್ಲಿ ಎಂಇಎಸ್ ಸದಸ್ಯರ ಪುಂಡಾಟ ವಿಚಾರಕ್ಕೆ ಸಂಬಂಧಪಟ್ಟಂತೆ
ಎಂಇಎಸ್ ಪುಂಡ ಪಾಲಿಕೆ ಸದಸ್ಯರ ವಿರುದ್ಧ ಕನ್ನಡಪರ ಹೋರಾಟಗಾರರ ಆಕ್ರೋಶ ಹೊರಹಾಕಿದ್ದಾರೆ.ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದು .ಪಾಲಿಕೆ ಪರಿಷತ್‌ ಸಭಾಂಗಣಕ್ಕೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಕರವೇ ಕಾರ್ಯಕರ್ತರು ಯತ್ನಿಸಿದರು ಈ ವೇಳೆ ಕರವೇ ಕಾರ್ಯಕರ್ತರನ್ನ ಪೊಲೀಸರು ತಡೆದರು ಎಂಇಎಸ್ ಸದಸ್ಯ ರವಿ ಸಾಂಳುಕೆ ಅಮಾನತು ಮಾಡಲು ಕರವೇ ಒತ್ತಾಯಿಸಿತು.
ಎಂಇಎಸ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಕರವೇ ಕಾರ್ಯಕರ್ತರು ನಾಡದ್ರೋಹಿ ಎಂಇಎಸ್ ಪುಂಡರನ್ನ ಗಡಿ ಪಾರು ಮಾಡಲು ಒತ್ತಾಯಿಸಿದರು. ಗಡಿಪಾರು ಮಾಡುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ಕರವೇ ಕಾರ್ಯಕರ್ತರನ್ನ ಕಚೇರಿಯಿಂದ ಹೊರಗೆ ಪೊಲೀಸರು ಕರೆದುಕೊಂಡು ಹೋದ ಘಟನೆ ನಡೆಯಿತು.

TV24 News Desk
the authorTV24 News Desk

Leave a Reply