


ಬೆಳಗಾವಿ:
ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ಐತಿಹಾಸಿಕ ಗಡಾದ ಮರಡಿ ಮೇಲೆ ಶನಿವಾರ ನಡೆದ 80ನೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಲಗೌಡ ಪಾಟೀಲ ಎರಡು ಬಾರಿ ಧ್ವಜಾರೋಹಣ ಮಾಡಿದ ಘಟನೆ ನಡೆಯಿತು.
14*21 ಅಡಿ ಅಳತೆಯ ಧ್ವಜವನ್ನು ಕೆಳಗಿನಿಂದಲೇ ಹಗ್ಗ ಎಳೆಯುತ್ತ ಆರೋಹಣ ಮಾಡುವುದು ವಾಡಿಕೆ.
ತಹಶೀಲ್ದಾರ್ ಧ್ವಜಾರೋಹಣ ನೆರವೇರಿಸಿ ಭಾಷಣ ಆರಂಭಿಸಿದಾಗ ಧ್ವಜ ತನ್ನಿಂದ ತಾನೇ ಕೆಳಗಿಳಿಯುತ್ತ ಹೋಯಿತು.
ಅದನ್ನು ನೋಡಿದವರು ಮೇಲೆ ಧ್ವಜದ ಹಗ್ಗ ಎಳೆಯಲು ಹೋದರು. ಆದರೆ, ಮೇಲೆ ಹೋಗಲಿಲ್ಲ.
ಮತ್ತೆ ಕೆಳಗೆ ಇಳಿಸಿ ತಹಶೀಲ್ದಾರ್ ಅವರನ್ನು ಕರೆದು ಆರೋಹಣ ಮಾಡಿಸಿದರು.









