Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಬೆಳಗಾವಿ

 ಗ್ರಾಮಸ್ಥರಲ್ಲಿ‌ ಆತಂಕ ಮಾಡಿದ ವಿಚಿತ್ರ ಎಲೆಕ್ಟ್ರಿಕಲ್ ಬಲೂನು

ಎಲ್ಲಿಂದ ಹಾರಿ ಬಂತೊಂದು ವಿಚಿತ್ರ ಎಲೆಕ್ಟ್ರಿಕಲ್ ಬಲೂನು
ಬೆಳಗಾವಿ :ಜಿಲ್ಲೆಯ ಬಾಗೇವಾಡಿ ಹತ್ತಿರದ ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರವಾದ  ಬಲೂನ ಬಂದು ಬಿದ್ದಿದ್ದು ಇದೀಗ  ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಈ ಬಲೂನು  ಎಲ್ಲಿಂದ ಬಂದಿದೆ.. ಹೇಗೆ ಬಂತು ಯಾವಾಗ ಹಾರಿ ಬಂದಿದೆ ಎಂದು ಗೊತ್ತಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈ ಬಲೂನಲ್ಲಿ ಕೆಲ ಎಲೆಕ್ಟ್ರಿಕ್ ಮಷೀನಗಳು ಪತ್ತೆ ಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಮತ್ತು ಚರ್ಚೆಗಳನ್ನು ಹುಟ್ಟು ಹಾಕಿದೆ. ಆತಂಕದಲ್ಲಿರುವ ಈ ಬಲೂನ ಏನು ಎಂತ ತಿಳಿಯದೇ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಬೈಲಹೊಂಗಲ ಪೋಲಿಸರು ಬಲೂನನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ USAನಲ್ಲಿ ಚೈನೀಸ ಸ್ಪೈ ಬಲೂನ್ ಸದ್ದು ಮಾಡಿದ್ದು ಅದೆ ಥರ ಇದು ಕೂಡ ಇರಬಹುದೆಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿಸಿದೆ.
ಆದರೆ ಅದು ಏನೆ ಇರಲಿ ಪೊಲೀಸ್ ರು‌ ಈ ಬಗ್ಗೆ ಪರಿಶೀಲನೆ ನಡಿಸಿದ್ದು, ಪೊಲೀಸ್ ವರದಿ ಬಳಿಕವೇ ಈ ಬಲೂನ್ ಎಲ್ಲಿಂದ ಬಂತು ಎಂದು ಮಾಹಿತಿ ತಿಳಿದುಬರುತ್ತದೆ.
TV24 News Desk
the authorTV24 News Desk

Leave a Reply

error: Content is protected !!