Uncategorized

ಮಹಿಳಾ ಸಚಿವಸ್ಥಾನಕ್ಕಾಗಿ ಮೂವರಲ್ಲಿ ಪೈಪೋಟಿಯಿದೆ ಯಾರಿಗೆ ಕೊಡ್ತಾರೆ ಕಾದು ನೋಡಬೇಕು! ಸತೀಶ್

ಬೆಳಗಾವಿ:

ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ
ಹೊಸ ಮುಖ್ಯಮಂತ್ರಿ ನಮಗೆ 100ದಿನ ಟಾರ್ಗೆಟ್ ಕೊಟ್ಟಿದ್ದಾರೆ.10ಟಾಸ್ಕ್ ಕೊಟ್ಟಿದ್ದಾರೆ ಹೊಸದಾಗಿ ಪ್ರಜಾಸೇವೆ ಖಾತೆ ಪ್ರಾರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.ನೂರು ದಿನಗಳಲ್ಲಿ ಟಾಸ್ಕ್ ಮುಗಿಸಲು ಪ್ರಯತ್ನ ಮಾಡುತ್ತೇವೆ ಹೊಸ ಖಾತೆಗೆ ಸಚಿವರ ನೇಮಕ ಮಾಡಿಲ್ಲ ಬಹಳಷ್ಟು ಖಾತೆಗಳೂ ಇನ್ನೂ ಹಂಚಿಕೆ ಆಗಿಲ್ಲ.ಯಾರು ಸಮಯ ಕೊಡ್ತಾರೆ ಅವರಿಗೆ ಪ್ರಜಾಸೇವೆ ಇಲಾಖೆ ಕೊಡ್ತಾರೆ ಎಂದರು.ಇನ್ನು ಮಹಿಳಾ ಸಚಿವರು ಬರೋವರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮುಖ್ಯಮಂತ್ರಿಗಳೇ ಮುನ್ನಡೆಸುತ್ತಿದ್ದಾರೆ ಎಂದರು.
ಮಹಿಳಾ ಸಚಿವರ ಆಯ್ಕೆಯಲ್ಲಿ ಗೊಂದಲಗಳಿವೆ.ಇರೋ ಎಲ್ಲ ಮಹಿಳಾ ಶಾಸಕರು ಸಮರ್ಥರಿದ್ದಾರೆ.ಸಚಿವ ಸ್ಥಾನದ ರೇಸ್ ನಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ , ಉಮಾಶ್ರೀ, ಗಾಯತ್ರಿ ಮೂರು ಜ‌ನ ಇದ್ದಾರೆ.
ಯಾರಿಗೆ ಮಂತ್ರಿಸ್ಥಾನ ಕೊಡ್ತಾರೆ ಅವರ ಪರವಾಗಿ ನಾವು ಕೆಲಸ ಮಾಡುತ್ತೇನೆ ಎಂದು ಸತೀಶ್ ಹೇಳಿದರು.ಖಾತೆ ಹಂಚಿಕೆ ವಿಚಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಠಹಿಡಿದಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಾರಿಗೆ‌‌ ಮಂತ್ರಿ ಮಾಡಬೇಕು ಅನೋದರ ಬಗ್ಗೆ ಚರ್ಚೆ ಆಗ್ತಿದೆ.
ಅಧಿವೇಶನ ಆದ್ಮೇಲೆ ಮಹಿಳೆಯರಿಗೆ ಸಚಿವ ಸ್ಥಾನ ಕೊಡ್ತಾರೆ ಎಂದರು. ಇನ್ನು ಸಚಿವ ಜಮೀರ ಅಹಮದ್ ಧ್ವಜಾರೋಹಣಕ್ಕೆ ಹಿಂದೇಟು ಹಾಕಿದ ವಿಚಾರಕ್ಕೆ ಪತ್ರದಲ್ಲಿ ಮುಖ್ಯವಾಗಿ ಬರೆದಿದ್ದಾರೆ
ಬಿಬಿಎಂಪಿ ಚುನಾವಣೆ ವಿಚಾರದ ಬಗ್ಗೆ ಅವರು ಹೇಳಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಈ ಕುರಿತು ಬಿಜೆಪಿ ಆರೋಪ ಮಾಡುತ್ತಿರುವ ವಿಚಾರಕ್ಕೆ ಅವರು ತಮ್ಮ ಕಚೇರಿಯಲ್ಲಿಯೇ ಬಿಜೆಪಿಯವರು ಧ್ವಜ ಹಾರಿಸೊದಿಲ್ಲ.ನಮ್ಮ ಮೇಲೆ ಆರೋಪ ಮಾಡೊಕೆ ಅವರಿಗೆ ಯಾವುದೇ ನೈತಿಕತೆ ಇಲ್ಲ ಎಂದರು.ಬಿಬಿಪಿಎಂ ಚುನಾವಣಾ ಬರ್ತಿದೆ ಅನೋದಕ್ಕೆ ಸಿಎಂಗೆ ಪತ್ರ ಬರೆದಿದ್ದಾರೆ.70ವರ್ಷಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ಆಗಿವೆ.ಇದರಲ್ಲಿ ರಾಜಕೀಯ ಮಾಡೊದು ಬೇಡ ಎಂದು ಸತೀಶ್ ಹೇಳಿದರು.ಇನ್ನು ನಾಳೆ ಯರಗಟ್ಟಿ, ಸವದತ್ತಿ, ರಾಮದುರ್ಗ ಬರ ವೀಕ್ಷಣೆ ಮಾಡುತ್ತೇನೆ ಮೂರು ತಾಲೂಕಿನಲ್ಲಿ ಮಾತ್ರ ಸಮಸ್ಯೆ ಇದೆ.ಮೂರು ತಾಲೂಕಿನಲ್ಲಿ ಬರ ವೀಕ್ಷಣೆ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ.ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂದು ಠರಾವುಗೆ ಪಾಲಿಕೆ ಹಿಂದೇಟು ಹಾಕುತ್ತಿರುವ ವಿಚಾರಕ್ಕೆ ಮೂರು ತಿಂಗಳ ಸಭೆ ಆಗಿಲ್ಲ ಉದ್ದೇಶಪೂರ್ವಕವಾಗಿ ಮಾಡ್ತಿಲ್ಲಮಾಧ್ಯಮಗಳು ಬೆಳಕು ಚೆಲ್ಲಬೇಕು ಅವರಿಗೆ ಅದರ ಬಗ್ಗೆ ಇಚ್ಛೆ ಇಲ್ಲ
ಉದ್ದೇಶಪೂರ್ವಕವಾಗಿಯೇ ಮಾಡ್ತಿಲ್ಲ ಎಂದು ಸತೀಶ್ ಆರೋಪಿಸಿದರು.

TV24 News Desk
the authorTV24 News Desk

Leave a Reply

error: Content is protected !!