Uncategorized

ಬೆಳಗಾವಿಯಲ್ಲಿ ಮತ್ತೆರಡು ಖಾಸಗಿ ಫೈನಾನ್ಸ್ ಗಳ ಮೇಲೆ ದಾಳಿ! ಇದು ಜಿಲ್ಲಾಡಳಿತದ ತಲಾಷ್!

ಬೆಳಗಾವಿ:

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ
ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ ಹಾಗೂ ಆದಿತ್ಯರಾಜ್, ಅಪೇಕ್ಸ್ ಬ್ಯಾಂಕ್ ಗಳ ವಿರುದ್ಧ ಜಿಲ್ಲಾಡಳಿತ ದಿಟ್ಟ ಕ್ರಮ ಕೈಗೊಂಡಿದೆ.ಸದ್ಗ ಬೆಳಗಾವಿಯಲ್ಲಿ ಮತ್ತೆರೆಡು ಕಂಪನಿಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದ್ದು
ಬೆಳಗಾವಿ ಎಸಿ ಶ್ರವಣಕುಮಾರ್ ನಾಯಕ್ ನೇತೃತ್ವದಲ್ಲಿ ದಾಳಿ ನಡೆದಿದೆ.ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್‌ ಸೂಚನೆ ಮೇರೆಗೆ ದಾಳಿ ಮಾಡಲಾಗಿದ್ದು
ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಕೊಡೊದಾಗಿ ಆಮಿಷವೊಡ್ಡಿ ಹಣ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದ ಹಿನ್ನೆಲೆ ಹಾಗೂ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹ ಆರೋಪ ಹಿನ್ನೆಲೆ ಕಾರ್ಯಾಚರಣೆ ನಡೆಸಲಾಗಿದ್ದು
ಬೆಳಗಾವಿ ಟಿಳಕವಾಡಿ ನಗರದ ಗ್ರೋ ಧನ್ ಎಲ್‌ಎಲ್‌ಪಿ ಕಂಪನಿ ಮೇಲೆ ದಾಳಿ ಮಾಡಲಾಗಿದೆ.ಗ್ರೋ ಧನ್ ಕಂಪನಿ ಕೃಷ್ಣಾ ಕೊಡಾಳೆ ಎಂಬಾತರದ್ದು ಹಾಗೂ ಮಹಾತ್ಮಾ ಫುಲೆ ರಸ್ತೆಯಲ್ಲಿ ಇರೋ ಸಿಟಿ ಇಂಡೆಕ್ಸ್‌ ಕಂಪನಿ ಮೇಲೆ ದಾಳಿ ಮಾಡಲಾಗಿದೆ. ಸಿಟಿ ಇಂಡೆಕ್ಸ್ ಕಂಪನಿ ಮಾಲೀಕರಾದ ರಾಹುಲ್, ವಿಠ್ಠಲ್ ಎಂಬಾತರದ್ದು ಎಂಬ ಮಾಹಿತಿ ದೊರೆತಿದ್ದು
ಕಂದಾಯ, ಸಹಕಾರ, ಪೊಲೀಸ್ ಇಲಾಖೆ ಅಧಿಕಾರಿಗಳಿಂದ ಶೋಧಕಾರ್ಯ ನಡೆದಿದೆ.
ತಡ ರಾತ್ರಿವರೆಗೂ ದಾಖಲೆಗಳ ಪರಿಶೀಲನೆ ಮುಂದುವರೆದಿದ್ದು
ಬಿಗಿ ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಸಾರ್ವಜನಿಕ ಹಣ ದುರುಪಯೋಗ ಆರೋಪದಡಿ
ದಾಳಿಯಾಗಿದ್ದು ಟಿಳಕವಾಡಿ ಮತ್ತು ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply

error: Content is protected !!