ಜಿಲ್ಲೆಧಾರವಾಡಬಳ್ಳಾರಿಬಾಗಲಕೋಟೆಬಿದರಬೆಳಗಾವಿಬೆಳಗಾವಿ ನಗರರಾಜಕೀಯರಾಜ್ಯರಾಯಿಚೂರುವಿಜಯಪುರಹಾವೇರಿ

ಬರಗಾಲ ಘೋಷಣೆಗಾಗಿ ಬೀದಿಗೆ ಬಂದ ಅನ್ನದಾತ!ರಾಜ್ಯ ಸರ್ಕಾರದ ವಿರುದ್ಧ ರೈತನ ರಣಕಹಳೆ!

ಬೆಳಗಾವಿ:

ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಪ್ರದೇಶಗಳ ರೈತರು ಭಾಗಿಯಾಗಿದ್ದರು. ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರತಿಭಟನೆಗೆ ಆಗಮಿಸಿದ ರೈತರು ತಲೆಯ ಮೇಲೆ ಒಣಗಿದ ಜೋಳ ಹಾಗೂ ಕಬ್ಬನ್ನು ಹೊತ್ತು ತಂದು ದರಣಿ ಕುಳಿತ ದೃಶ್ಯಗಳು ಕಂಡು ಬಂದವು. ಅಲ್ಲದೇ ಹೆಗಲ ಮೇಲೆ ಬಾರುಕೋಲು ಹಾಕಿಕೊಂಡು ಬಂದ ರೈತರು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.ಇದೇ ವೇಳೆ ಮಾಧ್ಯಮಗಳಿಗೆ ಮಾತನಾಡಿದ ಮುಖಂಡ ಚೂನಪ್ಪ ಪೂಜಾರಿ ಹೆಲಿಕಾಪ್ಟರ್ ನಲ್ಲಿ ಬರ ಅಧ್ಯಯನ ಮಾಡುವುದನ್ನು ಸಿಎಂ ಬಿಡಬೇಕು.ಕಳೆದ ನಾಲ್ಕು ತಿಂಗಳಿನಿಂದ ಮಳೆಯಾಗಿಲ್ಲ ಎಂದು ಸರ್ಕಾರಕ್ಕೂ ಹಾಗೂ ಸಿಎಂ ಡಿಕೆಶಿವಕುಮಾರ್ ಅವರಿಗೂ ಗೊತ್ತಿದೆ. ಎಕರೆಗೆ 50₹ ಸಾವಿರ ರೂ ಪರಿಹಾರ ಘೋಷಣೆ ಮಾಡಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ರಾತ್ರಿ ಹೊತ್ತು ಹೊಲಗದ್ದೆಗಳಿಗೆ ಸರಿಯಾದ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಒಂದು ತಾಲೂಕನ್ನೂ ಸಹ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಲ್ಲ. ಜಿಲ್ಲೆಯಲ್ಲಿರುವ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳು ರಾಜ್ಯದ ಸಿಎಂ ಹಾಗೂ ಅಧಿಕಾರಿಗಳಿಗೆ ಎಲ್ಲವೂ ಗೊತ್ತಿದೆ.ತಕ್ಷಣವೇ ರೈತರಿಗೆ ಪರಿಹಾರ ನೀಡಿ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಚೂನಪ್ಪ ಪೂಜಾರಿ ಆಗ್ರಹಿಸಿದರು.

TV24 News Desk
the authorTV24 News Desk

Leave a Reply

error: Content is protected !!