ಬೆಳಗಾವಿಬೆಳಗಾವಿ ನಗರ

ಬೆಳಗಾವಿ ಸ್ಮಾರ್ಟ್‌ ಸಿಟಿ ದಾಖಲಾತಿ ಹಾಗೂ ಖರ್ಚು ವೆಚ್ಚಕ್ಕೆ ಮಾತ್ರ ಸೀಮಿತವಾಗಿದೆಯೇ?  

ಬೆಳಗಾವಿ: ಬೆಳಗಾವಿ ಮಹಾನಗರ ಸ್ಮಾರ್ಟ್‌ ಸಿಟಿಯಾಗಿ ಬದಲಾಗಿದೆ. ಎಲ್ಲಿ ನೋಡಿದರೂ ಎಲ್ಲಾ ಸ್ಮಾರ್ಟ್ ಸೌಲಭ್ಯಗಳು. ಈ ಮಾತು ಕೇವಲ ದಾಖಲಾತಿ ಹಾಗೂ ಖರ್ಚು ವೆಚ್ಚಕ್ಕೆ ಮಾತ್ರ ಸೀಮಿತವಾಗಿದೆಯೇ ಅನ್ನೋ ಅನುಮಾನ ಕೆಲವೊಮ್ಮೆ ಕುಂದಾನಗರಿ ಸಾರ್ವಜನಿಕರನ್ನು ಕಾಡದೇ ಇರದು. ಇಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಕಾಣುವ ಮೂಲಭೂತ ಸೌಕರ್ಯಗಳ ಕೊರತೆಗೆ ಸ್ಮಾರ್ಟ್‌ ಸಿಟಿ ಎಂದು ಕರೆಸಿಕೊಳ್ಳುವ ಬೆಳಗಾವಿ ಜನತೆ ಬೇಸತ್ತು ಹೋಗಿದ್ದಾರೆ. ಇದು ಬೆಳಗಾವಿಯ ಆರ್ ಟಿ ಓ  ಕಚೇರಿ ಮುಂಭಾಗದಲ್ಲಿ ಇರುವ ಸ್ಮಾರ್ಟ್ ಸಿಟಿ ಬಸ್ ಸ್ಟಾಪ್. ಇಲ್ಲಿ ರಾತ್ರಿಯಾದರೆ ಬೆಳಕಿಗೆ ಕೊರತೆ. ಒಂದೇ ಒಂದು ಲೈಟ್ ಬೆಳಗೋದಿಲ್ಲ ಇಲ್ಲಿ ರೋಡ್ ಲೈಟ್ ಅಂತೂ ಕನಸಾಗಿದೆ. ದಿನ ರಾತ್ರಿ ನೂರಾರು ಪ್ರಯಾಣಿಕರು ಈ ಬಸ್ ಸ್ಟಾಪ್ ನಿಂದ ಬೇರೆ ಬೇರೆ ಪ್ರಮುಖ ಊರುಗಳಿಗೆ ತೆರಳುತ್ತಾರೆ. ಆದರೆ ಇಲ್ಲಿ ಒಂದೇ ಒಂದು ಲೈಟ್ ಇಲ್ಲದೇ ಇರೋದು ದುರ್ದೈವದ ಸಂಗತಿ. ಇನ್ನಾದರೂ ಜನನಾಯಕರು, ಅಧಿಕಾರಿಗಳು ಸ್ಮಾರ್ಟ್ ಸಿಟಿ ಪದಕ್ಕೆ ಅರ್ಥ ಕೊಡೋ ಕೆಲಸ ಮಾಡಲಿ ಅನ್ನೋದು ಇಲ್ಲಿಯ ಜನರ ಆಶಯ.
TV24 News Desk
the authorTV24 News Desk

Leave a Reply